ಕೋಲಾರ | ಗಣೇಶ ಮೂರ್ತಿಗಳ ವಿರೂಪಗೊಳಿಸಿರುವ ಆರೋಪ: ಮಲ್ಲೇಶ್, ಕಾಂತರಾಜು ಸೇರಿ ಐವರ ಬಂಧನ

Update: 2022-09-03 17:47 GMT

ಮಾಲೂರು, ಸೆ.3: ಗಣೇಶೋತ್ಸವದ ಪ್ರಯುಕ್ತ ಯುವಕ ಮಂಡಳಿ ಮತ್ತು ಸಂಘ ಸಂಸ್ಥೆಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ ಘಟನೆ ವರದಿಯಾಗಿದೆ.

ಶುಕ್ರವಾರ ತಡರಾತ್ರಿ ನಗರದ ಕುಂಬಾರಪೇಟೆಯಲ್ಲಿ 4, ಬಾಬುರಾವ್ ಬೀದಿಯಲ್ಲಿ 1, ಕುಪ್ಪಶೆಟ್ಟಿ ಬಾವಿ ಬೀದಿ ಬಳಿ 1, ಶ್ರೀಧರ್ಮರಾಯಸ್ವಾಮಿ ದೇವಸ್ಥಾನದ ಬಳಿ 1, ಸಿಪಿ ರಸ್ತೆಯಲ್ಲಿ 1 ಕೆ.ಎಂ.ಅರ್. ಸ್ಟೋರ್ಸ್‌ ಬಳಿ 1 ಸೇರಿ ಒಟ್ಟು 9ಕಡೆ ಗಣೇಶ ಮೂರ್ತಿಗಳನ್ನು ವಿರೂಪಗೊಳಿಸಿರುವುದು ವರದಿಯಾಗಿದೆ. ಇದರ ಜತೆಗೆ ಹಬ್ಬದ ಶುಭಾಶಯಗಳನ್ನು ಕೋರಿ ಹಾಕಲಾಗಿದ್ದ ಫ್ಲೆಕ್ಸ್‌ಗಳು ಮತ್ತು ಅಲ್ಲೇ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನದ ಸೀಟುಗಳನ್ನು ಬ್ಲೇಡ್‌ನಿಂದ ಕೊಯ್ದು ಹಾಕಿರುವುದು ತಿಳಿದುಬಂದಿದೆ.

ಇದನ್ನೂ ಓದಿ>>> ಮಹಾಂತ ರುದ್ರಸ್ವಾಮೀಜಿಗೆ ಮುರುಘಾ ಮಠದ ಪೀಠದ ಹೊಣೆ

ಘಟನೆಯ ಮಾಹಿತಿ ತಿಳಿದ ಮಾಲೂರು ಪೊಲೀಸರು ಸಿಸಿಟಿವಿ ದೃಶ್ಯ ಆಧಾರಿಸಿ ಗುಮಾನಿ ಮೇರೆಗೆ ಮಲ್ಲೇಶ್, ಕಾಂತರಾಜು, ಗಿರೀಶ್, ಪುನೀತ್, ಚಂದು ಎಂಬವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಶನಿವಾರ ಮಧ್ಯಾಹ್ನ ಆರೋಪಿಗಳನ್ನು ಬಂಧಿಸಿದ ವೇಳೆ ಠಾಣೆ ಮುಂಭಾಗ ಅರೋಪಿಗಳ ಪರ ಮತ್ತು ವಿರುದ್ಧ ಹೈಡ್ರಾಮ ಜರುಗಿರುವುದು ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News