×
Ad

ಚಾಮರಾಜನಗರ: 2 ಗುಂಪುಗಳ ನಡುವೆ ಘರ್ಷಣೆ

Update: 2022-09-03 23:48 IST

ಚಾಮರಾಜನಗರ, ಸೆ.3: ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ಬಗ್ಗೆ ಶನಿವಾರ ರಾತ್ರಿ ವರದಿಯಾಗಿದೆ. 

ಯುವಕನೊಬ್ಬ ಸೈಕಲ್ ವೀಲಿಂಗ್‌ (wheeling) ಮಾಡುತ್ತಿರುವಾಗ ರಸ್ತೆಯಲ್ಲಿ ಹೋಗುತ್ತಿದ್ದ ಇನ್ನೊಂದು ಗುಂಪಿನ ಯುವಕನಿಗೆ ತಾಗಿದೆ. ಇದೇ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿ ಎನ್ನಲಾಗಿದೆ. 

ನಗರದ ಸಂತೇಮರಹಳ್ಳಿ ವೃತ್ತದ ಬಳಿ ರಾತ್ರಿ 9.15ರ ಸುಮಾರಿಗೆ ಎರಡೂ ಗುಂಪುಗಳ  ಜನರು ಸೇರಿದ್ದರು. ಈ ವೇಳೆ ಘರ್ಷಣೆಯಾಗಿದ್ದು,  ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್‌ ಸಿಬ್ಬಂದಿ ಲಘು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದ್ದಾರೆ ಎಂದು ತಿಳಿದು ಬಂದಿದೆ.  

ಘಟನೆಯ ಬಳಿಕ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. 

ಇದನ್ನೂ ಓದಿ: ಕೋಲಾರ | ಗಣೇಶ ಮೂರ್ತಿಗಳ ವಿರೂಪಗೊಳಿಸಿರುವ ಆರೋಪ: ಮಲ್ಲೇಶ್, ಕಾಂತರಾಜು ಸೇರಿ ಐವರ ಬಂಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News