ಬಸವಸಿದ್ಧಲಿಂಗ ಸ್ವಾಮೀಜಿ ಸಾವು ಪ್ರಕರಣ: ಡೆತ್​ ನೋಟ್​ನಲ್ಲೇನಿದೆ?

Update: 2022-09-05 10:25 GMT
 ಬಸವಸಿದ್ಧಲಿಂಗ ಸ್ವಾಮೀಜಿ 

ಬೆಳಗಾವಿ: ಬೈಲಹೊಂಗಲ ತಾಲೂಕಿನ ನೇಗಿನಹಾಳದ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ (50) ಸೋಮವಾರ ನೇಗಿನಹಾಳ ಗ್ರಾಮದ ಮಠದ ಆವರಣದಲ್ಲೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಡೆತ್ ನೋಟ್ ಒಂದು ಪತ್ತೆಯಾಗಿದೆ.

'ನಾನು ಯಾವುದೇ ತಪ್ಪನ್ನು ಮಾಡಿಲ್ಲ' ಎಂದು ಸ್ವಾಮೀಜಿಗಳು ಬರೆದಿದ್ದು ಎನ್ನಲಾದ ಡೆತ್ ನೋಟ್ ನಲ್ಲಿ ಅವರ ಸಹಿ ಕಾಣಿಸುವುದಿಲ್ಲ. 

ಡೆತ್​ ನೋಟ್​ನಲ್ಲೇನಿದೆ?

'ಕ್ಷಮಿಸಿಬಿಡಿ ಭಕ್ತರೆ. ನಾನು ಯಾವುದೇ ತಪ್ಪನ್ನು ಮಾಡಿಲ್ಲ. ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ವಿಚಾರಣೆಗೊಳಪಡಿಸಬೇಡಿ. ಈ ಲೋಕದ ಗೊಡವೆ ಸಾಕು. ನಾ ಈ ದಾರಿ ಹಿಡಿದಿದ್ದೇನೆ. ಶ್ರೀ ಮಠದ ಈಗಿನ ಕಮಿಟಿಯವರು ಮತ್ತು ನೇಗಿನಹಾಳ ಭಕ್ತರು ಎಲ್ಲರೂ ಕೂಡಿಕೊಂಡು ಶ್ರೀ ಮಠವನ್ನು ಮುನ್ನಡೆಸಿ. ಹಡೆದ ತಾಯಿ ನನ್ನನ್ನು ಕ್ಷಮಿಸಿಬಿಡು. ಶ್ರೀಮಠದ ಮಕ್ಕಳೇ ನನ್ನನ್ನು ಕ್ಷಮಿಸಿ. ನನ್ನ ಪಯಣ ಬಸವ ಮಡಿವಾಳೇಶ್ವರನೆಡೆಗೆ. ಜೈ ಬಸವೇಶ, ಜೈ ಮಡಿವಾಳೇಶ. ಶರಣು ಶರಣಾರ್ಥಿ. ಜಗದ್ಗುರು ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ಮಠ. ಬಸವ ಸಿದ್ಧಲಿಂಗ ಸ್ವಾಮಿಗಳು' 

ಡೆತ್ ನೋಟ್


Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News