ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ: ಮೇಯರ್ ಆಗಿ ಬಿಜೆಪಿಯ ಶಿವಕುಮಾರ್ ಆಯ್ಕೆ

Update: 2022-09-06 08:41 GMT
ಶಿವಕುಮಾರ್ / ರೂಪ 

ಮೈಸೂರು: ಮೈಸೂರು(Mysuru) ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ(BJP) ಮತ್ತು ಜೆಡಿಎಸ್(JDS) ಮೈತ್ರಿ ಮಾಡಿಕೊಂಡಿದ್ದು, ಮೇಯರ್-ಉಪಮೇಯರ್ ಎರಡೂ ಸ್ಥಾನವನ್ನು ಬಿಜೆಪಿ ಪಡೆದುಕೊಂಡಿದೆ.

ಮೈಸೂರು ಮಹಾನಗರ ಪಾಲಿಕೆಯ ನಾಲ್ಕನೇ ಅವಧಿಗೆ ನಡೆದ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಶಿವಕುಮಾರ್ ಮೇಯರ್ ಆಗಿ ಆಯ್ಕೆಯಾದರೆ, ಬಿಜೆಪಿಯ ರೂಪ ಅವರು ಉಪಮೇಯರ್ ಆಗಿ ಆಯ್ಕೆಯಾದರು. 

ಬಿಜೆಪಿಯ ಶಿವಕುಮಾರ್ ಗೆ  ಮೇಯರ್ ಮತ್ತು ಜೆಡಿಎಸ್ ನ ರೇಷ್ಮಾ ಬಾನು ಅವರಿಗೆ ಉಪಮೇಯರ್ ಸ್ಥಾನ ಎಂದು ಬಿಜೆಪಿ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದವು ಎನ್ನಲಾಗಿತ್ತು. ಆದರೆ ಜೆಡಿಎಸ್ ಅಭ್ಯರ್ಥಿ ಬಿಸಿಎಂ ಸರ್ಟಿಫಿಕೇಟ್ ನೀಡಿರದ ಕಾರಣ ಚುನಾವಣಾಧಿಕಾರಿಗಳು ಇವರ ನಾಮಪತ್ರ ತಿರಸ್ಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News