ಚಿಕ್ಕಮಗಳೂರು | ಭಾರೀ ಮಳೆಗೆ ಸ್ಮಶಾನ ಜಲಾವೃತ: ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದೆ 2 ದಿನ ಮನೆಯಲ್ಲೇ ಉಳಿದ ಮೃತದೇಹ!

Update: 2022-09-07 08:49 GMT

ಚಿಕ್ಕಮಗಳೂರು: ನಿರಂತರ ಮಳೆಯಿಂದಾಗಿ ಸ್ಮಶಾನ ಜಲಾವೃತಗೊಂಡಿದ್ದ ಪರಿಣಾಮ ವ್ಯಕ್ತಿಯೋರ್ವರ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಿರುವಂತಹ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ತಾಲೂಕಿನ ಎಸ್.ಬೊಮ್ಮನಹಳ್ಳಿಯಲ್ಲಿ ವರದಿಯಾಗಿದೆ.

ಎಸ್.ಬೊಮ್ಮನಹಳ್ಳಿಯ ಪ್ರಮೋದ್(55)  ಎಂಬವರು ಮೃತಪಟ್ಟಿದ್ದರು. ಮೂರು ದಿನಗಳಿಂದ ಚಿಕ್ಕದೇವನೂರು ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು,  ಇ್ಲಲಿನ ಸ್ಮಶಾನದ ಜಾಗ ಜಲಾವೃತಗೊಂಡಿತ್ತು. ಇದರಿಂದ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಕುಟುಂಬ ಸದಸ್ಯರು ಪರದಾಡಿದ್ದರು. ಪರ್ಯಾಯ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ಮೃತದೇಹವನ್ನು ಮನೆಯಲ್ಲೇ ಇಟ್ಟಿದ್ದರು ಎನ್ನಲಾಗಿದೆ. 

ಎರಡು ದಿನದ ಬಳಿಕ ಸ್ಮಶಾನದ ಜಾಗದಲ್ಲಿದ್ದ ನೀರು ಸ್ವಲ್ಪ ಕಡಿಮೆಯಾದ ಬಳಿಕವೇ ಗ್ರಾಮಸ್ಥರು ನಿನ್ನೆ (ಮಂಗಳವಾರ) ಸಂಜೆ ವೇಳೆ  ಮೃತರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ ಎಂದು ತಿಳಿದು ಬಂದಿದೆ.  

ಇನ್ನು ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿರುವ ಮೃತರ ಕುಟುಂಬಸ್ಥರು ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 ಇದನ್ನೂ ಓದಿ:  ಮಧ್ಯಪ್ರದೇಶ: ಬರಿಗೈಯಲ್ಲಿ ಹುಲಿಯೊಂದಿಗೆ ಹೋರಾಡಿ ಒಂದು ವರ್ಷದ ಮಗನನ್ನು ರಕ್ಷಿಸಿದ ತಾಯಿ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News