ಮಗುವಿಗೆ ಪಾಸ್‍ಪೋರ್ಟ್ ನೀಡಲು ತಂದೆಯ ಒಪ್ಪಿಗೆ ಬೇಕಿಲ್ಲ: ಹೈಕೋರ್ಟ್

Update: 2022-09-07 13:10 GMT

ಬೆಂಗಳೂರು, ಸೆ.7: ದಂಪತಿಗೆ ವಿಚ್ಛೇದನ ನೀಡಿದ ಕೌಟುಂಬಿಕ ನ್ಯಾಯಾಲಯ ಮಗುವನ್ನು ಸಂಪೂರ್ಣವಾಗಿ ತಾಯಿಯ ಸುಪರ್ದಿಗೆ ವಹಿಸಿದ್ದ ಸಂದರ್ಭದಲ್ಲಿ ಆ ಮಗುವಿಗೆ ಪಾಸ್‍ಪೋರ್ಟ್ (Passport) ನೀಡಲು ತಂದೆಯ ಒಪ್ಪಿಗೆ ಬೇಕೆಂದು ಪಾಸ್‍ಪೋರ್ಟ್ ಅಧಿಕಾರಿ ಒತ್ತಾಯಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. 

ಅಪ್ರಾಪ್ತ ಮಗುವಿಗೆ ಪಾಸ್‍ಪೋರ್ಟ್ ವಿತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಪಾರ್ಸ್‍ಪೋರ್ಟ್ ಅಧಿಕಾರಿಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. 

ಅರ್ಜಿದಾರ ಮಹಿಳೆ ಸಲ್ಲಿಸಿರುವ ಅರ್ಜಿಯನ್ನು ಅವರ ಮಾಜಿ ಪತಿಯ ಉಪಸ್ಥಿತಿ ಅಥವಾ ಒಪ್ಪಿಗೆ ಕೇಳದೆಯೇ ಅಥವಾ ಒಪ್ಪಿಗೆ ಕೇಳದೆ ಪರಿಗಣಿಸಬೇಕೆಂದು ಪ್ರಾದೇಶಿಕ ಪಾಸ್‍ಪೋರ್ಟ್ ಅಧಿಕಾರಿಗೆ ಹೈಕೋರ್ಟ್ ನಿರ್ದೇಶಿಸಿದೆ. 

ಅಲ್ಲದೆ, ಅರ್ಜಿದಾರ ಮಹಿಳೆ ಕೌಟುಂಬಿಕ ಕೋರ್ಟ್‍ನ ಪೂರ್ವಾನುಮತಿ ಇಲ್ಲದೆ ಪ್ರಯಾಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಈ ಕುರಿತು ಮಹಿಳೆ ಏನಾದರೂ ಅರ್ಜಿ ಸಲ್ಲಿಸಿದರೆ ಸಂಬಂಧಪಟ್ಟ ಕೋರ್ಟ್ ಶೀಘ್ರ ನಿರ್ಧರಿಸಬೇಕೆಂದು ಆದೇಶಿಸಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News