ಬೆಂಗಳೂರು: ಸ್ನೇಹಿತನಿಗೆ ಹಲ್ಲೆ ನಡೆಸಿ 2ನೇ ಮಹಡಿಯ ಕಿಟಿಕಿಯಿಂದ ಹಾರಿದ ಯುವಕ!
ಬೆಂಗಳೂರು, ಸೆ.7: ಸ್ನೇಹಿತನಿಗೆ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿ ನಂತರ ಹೆದರಿಕೆಯಿಂದ ಎರಡನೇ ಮಹಡಿಯ ಕಿಟಕಿಯಿಂದ ಹಾರಿ ಗಾಯಗೊಂಡಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಗಾಲ್ಯಾಂಡ್ ಮೂಲದ ಹೇಕಾ ಹಲ್ಲೆಗೊಳಗಾದ ಯುವಕನಾಗಿದ್ದು, ರೋಹಿತ್ ಹಲ್ಲೆ ನಡೆಸಿ ಬಳಿಕ ಭಯದಿಂದ ಎರಡನೇ ಮಹಡಿಯಿಂದ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ ಎಂದು ತಿಳಿದುಬಂದಿದೆ.
ರೋಹಿತ್ ಹಾಗೂ ಹೇಕಾ ಸೇರಿದಂತೆ ಐವರು ಸ್ನೇಹಿತರು ಒಂದೇ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ಐವರು ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ರೋಹಿತ್ ಹಾಗೂ ಹೇಕಾ ನಡುವೆ ಮಾತಿನ ವಾಗ್ವಾದ ನಡೆದಿದ್ದು, ಜಗಳ ತಾರಕಕ್ಕೇರಿದೆ.
ಈ ವೇಳೆ ರೋಹಿತ್, ಕತ್ತರಿಯಿಂದ ಹೇಕಾ ಪಕ್ಕೆಲುಬಿಗೆ ಚುಚ್ಚಿ ಹಲ್ಲೆ ನಡೆಸಿದ್ದಾನೆ. ಬಳಿಕ ಭಯದಿಂದ ಕಿಟಕಿಯಿಂದ ಕೆಳಗೆ ಹಾರಿದ್ದಾನೆ. ಬೇಗೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿವಿ ಆವರಣದಲ್ಲಿ ದೇವಸ್ಥಾನ ನಿರ್ಮಿಸಿದರೆ ಬೃಹತ್ ಪ್ರತಿಭಟನೆ: ವಿದ್ಯಾರ್ಥಿಗಳ ಎಚ್ಚರಿಕೆ