ಸೆ.10ಕ್ಕೆ ಬಿಜೆಪಿಯ 'ಜನ ಸ್ಪಂದನ' (ಜನೋತ್ಸವ) ಸಮಾವೇಶ: ಸಚಿವ ಸುಧಾಕರ್
Update: 2022-09-07 23:35 IST
ಬೆಂಗಳೂರು: 'ಜನ ಸ್ಪಂದನ (ಜನೋತ್ಸವ) - ಸಾರ್ಥಕ ಸೇವೆ ಹಾಗು ಸಬಲೀಕರಣ' ಕಾರ್ಯಕ್ರಮವನ್ನು ಶನಿವಾರ, ಸೆಪ್ಟೆಂಬರ್ 10, ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ' ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
'ಇಡೀ ರಾಜ್ಯ ಮುತ್ಸದ್ಧಿ ನಾಯಕರೊಬ್ಬರನ್ನು ಕಳೆದುಕೊಂಡ ಶೋಕದಲ್ಲಿರುವುದರಿಂದ' ನಾಳಿನ ಕಾರ್ಯಕ್ರಮವನ್ನು ಮುಂದೂಡಲಾಗಿದೆ' ಎಂದು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಜನೋತ್ಸವ ಸಮಾವೇಶಕ್ಕೆ ಬದಲಾಗಿ 'ಜನ ಸ್ಪಂದನ' ಸಮಾವೇಶವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದೆ.