ಮಡಿಕೇರಿ: ಲಾಡ್ಜ್‌ನಲ್ಲಿ ಮಂಗಳೂರು ಶಿಕ್ಷಣ ಇಲಾಖೆಯ ನೌಕರ ಆತ್ಮಹತ್ಯೆ
Update: 2022-09-08 11:44 IST
ಮಡಿಕೇರಿ ಸೆ.8 : ಮಂಗಳೂರಿನ (Mangaluru) ಶಿಕ್ಷಣ ಇಲಾಖೆಯ ನೌಕರರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿಯ ಲಾಡ್ಜ್ ಒಂದರಲ್ಲಿ ನಡೆದಿದೆ.
ಮಂಗಳೂರಿನ ಶಿಕ್ಷಣ ಇಲಾಖೆಯಲ್ಲಿ ನೌಕರನಾಗಿರುವ ಶಿವಾನಂದ್ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಇವರು ಮಂಗಳೂರು ಬಜ್ಜೆ ಮೂಲದವರು ಎಂದು ತಿಳಿದು ಬಂದಿದೆ.
ಶಿವಾನಂದ್ ಮಂಗಳೂರು ದಕ್ಷಿಣ ವಿಭಾಗದ ಬಿಇಓ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.
ನಗರದ ಕೆಎಸ್ಸಾರ್ಟಿಸಿ (ksrtc) ಬಸ್ ನಿಲ್ದಾಣದ ಬಳಿಯ ಲಾಡ್ಜ್‌ನಲ್ಲಿ ಶಿವಾನಂದ್ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರಕಾರಣ ತಿಳಿದುಬಂದಿಲ್ಲ.
ಸಹೋದರ ಕೃಷ್ಣಾನಂದ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪುತ್ತೂರು | ಪ್ರಯಾಣಿಕನನ್ನು ಕಾಲಿನಿಂದ ತುಳಿದು ಬಸ್ಸಿನಿಂದ ಹೊರಹಾಕಿದ ಪ್ರಕರಣ: KSRTC ನಿರ್ವಾಹಕ ಅಮಾನತು