ಮೈಸೂರು ದಸರಾ: ಅರಮನೆಗೆ ಆಗಮಿಸಿದ 2ನೇ ತಂಡದ ಆನೆಗಳು, ಸರಳ ಸ್ವಾಗತ
Update: 2022-09-08 12:51 IST
ಮಡಿಕೇರಿ : ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ನಾಲ್ಕು ಆನೆಗಳ ಎರಡನೇ ತಂಡ ಇಂದು ದುಬಾರೆಯಿಂದ ಮೈಸೂರು ಅರಮನೆಗೆ ಆಗಮಿಸಿದ್ದು, ಸರಳ ಸ್ವಾಗತ ಕೋರಲಾಗಿದೆ.
ದುಬಾರೆ ಸಾಕಾನೆ ಶಿಬಿರದಿಂದ ಪ್ರಶಾಂತ್, ಶ್ರೀರಾಮ, ಸುಗ್ರೀವ ಮತ್ತು ಆನೆಕಾಡು ಶಿಬಿರದಿಂದ ವಿಜಯ ಸೇರಿದಂತೆ ಒಟ್ಟು ನಾಲ್ಕು ಆನೆಗಳು ಲಾರಿ ಮೂಲಕ ಮೈಸೂರು ತಲುಪಿದೆ.
ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆ ಗಜಪಡೆ ಸ್ವಾಗತ ಕಾರ್ಯಕ್ರಮ ರದ್ದಾಗಿತ್ತು. ಮೈಸೂರು ತಲುಪಿದ ಎರಡನೇ ತಂಡದ ಆನೆಗಳಿಗೆ ಅರಮನೆ ಆವರಣದಲ್ಲಿ ತಾಲೀಮು ನಡೆಸಲು ಅವಕಾಶ ಮಾಡಲಾಗಿದೆ.
ಆನೆಗಳಿಗೆ ಸ್ನಾನ ಮಾಡಿಸುತ್ತಿರುವ ಮಾವುತ