ಏಷ್ಯಾ ಕಪ್ | ಪಾಕ್ ತಂಡ ಪರ ವಾಟ್ಸಪ್ ಸ್ಟೇಟಸ್ ಹಾಕಿದ ಆರೋಪ: ಕೋಲಾರದಲ್ಲಿ ಓರ್ವನ ಬಂಧನ
Update: 2022-09-08 18:18 IST
ಕೋಲಾರ : ಏಷ್ಯಾಕಪ್ ನಲ್ಲಿ ಭಾರತ ತಂಡದ ವಿರುದ್ದ ಪಾಕಿಸ್ತಾನ ಜಯಗಳಿಸಿದ ಹಿನ್ನಲೆ, ಪಾಕಿಸ್ತಾನ ಪರ ಘೋಷಣೆ ಹಾಕಿ ಸಂದೇಶ ರವಾನಿಸಿದ್ದ ಆರೋಪದ ಮೇಲೆ ಮೂವರ ವಿರುದ್ಧ ಶ್ರೀನಿವಾಸಪುರ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ, ಓರ್ವನನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಸುಹೈಲ್ ಪಾಷಾ, ತೋಹಿದ್ ಭಾಷಾ, ಮುನ್ಸೂರ್ ಉಲ್ಲಾ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದ್ದು, ಸುಹೇಲ್ ಎಂಬಾತನನ್ನು ಬಂಧಿಸಿದ್ದಾರೆ.
ಪಾಕಿಸ್ತಾನ ಧ್ವಜದೊಂದಿಗೆ ಭಾರತ ತಂಡ ಅಣುಕಿಸುವ ಹಾಗೆ ವಾಟ್ಸಪ್ ಸ್ಟೇಟಸ್ ಹಾಕಿದ್ದ ಮೂವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡ ರಾಮಾಂಜಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಓರ್ವನನ್ನ ಬಂಧಿಸಿದ್ದಾರೆ. ಉಳಿದ ಇಬ್ಬರಿಗಾಗಿ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾತ್ರಿ ಪ್ರಯಾಣಕ್ಕೆ ಪೊಲೀಸರಿಗೆ ನಿರ್ಬಂಧ