ಗದಗ: ಚೂರಿಯಿಂದ ಚುಚ್ಚಿ ಯುವಕನ ಕೊಲೆ
Update: 2022-09-09 12:47 IST
ಗದಗ, ಸೆ.9: ಯುವಕನೋರ್ವನನ್ನು ತಂಡವೊಂದು ಚೂರಿಯಿಂದ ಚುಚ್ಚಿ ಕೊಲೆಗೈದ (Murder) ಘಟನೆ ಗದಗ ತೋಂಟದಾರ್ಯ ಮಠದ ಬಳಿ ಗುರುವಾರ ತಡರಾತ್ರಿ ನಡೆದಿದೆ.
ಮೃತರನ್ನು ಸುದೀಪ್ ಮುಂಡೆವಾಡಿ(27) ಎಂದು ಗುರುತಿಸಲಾಗಿದೆ. ಆದಿತ್ಯ ಮುತಗಾರ ಎಂಬಾತ ಸೇರಿದಂತೆ ಐವರ ತಂಡ ಕೊಲೆ ಆರೋಪಿಗಳೆನ್ನಲಾಗಿದೆ.
ದುಷ್ಕರ್ಮಿಗಳು ಹೊಟ್ಟೆ ಭಾಗಕ್ಕೆ ಚೂರಿಯಿಂದ ಚುಚ್ಚಿದ್ದರಿಂದ ತೀವ್ರ ಗಾಯಗೊಂಡಿದ್ದ ಸುದೀಪ್ ಮುಂಡೆವಾಡಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರೆನ್ನಲಾಗಿದೆ.
ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.