ದಸರಾ ಆನೆಗಳಿಗೆ ತೂಕ ಪರೀಕ್ಷೆ: ಕ್ಯಾಪ್ಟನ್ 'ಅಭಿಮನ್ಯು' ತೂಕ ಎಷ್ಟು?

Update: 2022-09-09 13:09 GMT

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ‘ಅಭಿಮನ್ಯು’ ನೇತೃತ್ವದ 14 ಆನೆಗಳ ತೂಕ ಪರೀಕ್ಷೆ ಶುಕ್ರವಾರ ನಡೆಯಿತು.

ದಸರಾ ಗಜಪಡೆಗಳ ತೂಕ ಪ್ರಕ್ರಿಯೆಯು ಮೈಸೂರಿನ ಧನ್ವಂತ್ರಿಯಲ್ಲಿನ ವೇ ಬ್ರಿಡ್ಜ್ (ಲಾರಿಗಳಿಗೆ ತೂಕ ಹಾಕುವ ವೇವ್ ಬ್ರಿಡ್ಜ್) ನಲ್ಲಿ ನಡೆಯಿತು.

ಕ್ಯಾಪ್ಟನ್  ‘ಅಭಿಮನ್ಯು’ 5000 ಕೆ.ಜಿ ಭಾರವಿದ್ದು, ದಸರಾ ಆನೆಗಳಲ್ಲೇ ನಾಲ್ಕನೇ ಹೆಚ್ಚು ತೂಕದ ಆನೆಯಾಗಿದೆ. ಕಳೆದ ತಿಂಗಳು ನಡೆದಿದ್ದ ತೂಕ ಪರೀಕ್ಷೆಯಲ್ಲಿ 4,770 ಕೆ.ಜಿ ಭಾರವಿದ್ದ ಅಭಿಮನ್ಯು 230 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.

ಈ ಬಾರಿಯೂ ಅರ್ಜನನೇ ಹೆಚ್ಚು ಭಾರ:  ತೂಕದಲ್ಲಿ ಅರ್ಜುನನೇ ಬಲಶಾಲಿಯಾಗಿದ್ದು, 5885 ಕೆ.ಜಿ ತೂಕ ಹೊಂದಿದ್ದಾನೆ. ಚೈತ್ರ 3235, ಭೀಮಾ 4345, ಗೋಪಾಲಸ್ವಾಮಿ 5460, ಮಹೇಂದ್ರ 4450, ವಿಜಯ 2760, ಗೋಪಿ 4670, ಧನಂಜಯ 4890, ಶ್ರೀರಾಮ 4475, ಲಕ್ಷ್ಮೀ 3150, ಸುಗ್ರೀವ 4785, ಕಾವೇರಿ 3245 ಇನ್ನೂ ಈ ಗಜಪಡೆಯಲ್ಲಿ ಕಿರಿಯವನಾಗಿರುವ ಪಾರ್ಥಸಾರಥಿ 3445 ಕೆಜಿ ತೂಕವನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News