×
Ad

ಮಾಧ್ಯಮಗಳ ಸುದ್ದಿಗೆ ಸ್ಪಷ್ಟೀಕರಣ ನೀಡುವುದು ಕಡ್ಡಾಯ: ಶಿಕ್ಷಣ ಇಲಾಖೆಯ ಅಧಿಕಾರಿಗೆ ಸೂಚನೆ

Update: 2022-09-09 22:51 IST

ಬೆಂಗಳೂರು, ಸೆ.9: ಶಿಕ್ಷಣ ಇಲಾಖೆಯ ಕಾರ್ಯಗಳ ಕುರಿತಂತೆ ಪ್ರಸಾರವಾಗುವ ಸುದ್ದಿಗಳ ಬಗ್ಗೆ ಆಯಾ ವಿಷಯಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಗಮನಹರಿಸಿ ಸ್ಪಷ್ಟೀಕರಣ ಹಾಗೂ ವಿವರಣೆಯನ್ನು ನೀಡುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ. 

ಇಲಾಖೆಯ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಪ್ರಸಾರ/ಪ್ರಕಟವಾಗುವ ಕೆಲವು ಸುದ್ದಿಗಳಿಂದ ಇಲಾಖೆಯ ವರ್ಚಸ್ಸಿಗೆ ಧಕ್ಕೆ ಬರಬಹುದಾಗಿರುತ್ತದೆ. ಕೆಲವು ಸುದ್ದಿಗಳಲ್ಲಿ ಸತ್ಯಾಂಶ ಇಲ್ಲದೇ ಇರಬಹುದು. ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತಂತೆ ಪ್ರಕಟಿಸದೇ ಇದ್ದಲ್ಲಿ, ನಿಷ್ಕ್ರಿಯತೆ ತೋರಿದಂತೆ ಆಗುತ್ತದೆ. ಹಾಗಾಗಿ ಸ್ಪಷ್ಟೀಕರಣ ನೀಡಲು ಸೂಚಿಸಲಾಗಿದೆ. 

ಇಲಾಖೆಯ ವಿವಿಧ ಕಚೇರಿಗಳ ಮುಖ್ಯಸ್ಥರು ಸುದ್ದಿ ಮಾಧ್ಯಮದಲ್ಲಿ ಪ್ರಕಟಗೊಂಡ ಸಂದರ್ಭದಲ್ಲಿ ವಿವೇಚನಾ ಪೂರ್ವಕವಾಗಿ ಗಮನಹರಿಸಿ ಅಗತ್ಯ ಸ್ಪಷ್ಟೀಕರಣವನ್ನು ಸಹಾಯಕ ನಿರ್ದೇಶಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಗಳಿಗೆ ಕಡತ ಮಂಡಿಸಿ ಆಯಾ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಬೇಕು. ಮಾಸಿಕವಾಗಿ ಸ್ಪಷ್ಟಿಕರಣದ ಪ್ರತಿಯ ಸಹಿತ ವರದಿಯನ್ನು ಸಲ್ಲಿಸಲು ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News