×
Ad

ರಾಹುಲ್ ಗಾಂಧಿಯ ಉಡುಗೆ ತೊಡುಗೆ ಬಗ್ಗೆ ಮಾತಾಡಲು BJPಗೆ ಯಾವ ನೈತಿಕತೆಯಿದೆ?: ದಿನೇಶ್ ಗುಂಡೂರಾವ್

Update: 2022-09-10 11:06 IST

ಬೆಂಗಳೂರು: 'ರಾಹುಲ್ ಗಾಂಧಿಯವರ  (Rahul Gandhi) ದುಬಾರಿ ಟಿ- ಶರ್ಟ್ ಬಗ್ಗೆ ವ್ಯಂಗ್ಯವಾಡುವ BJP, ಮೋದಿಯವರ ದುಬಾರಿ ಸೂಟಿನ ಬಗ್ಗೆಯೂ ವ್ಯಂಗ್ಯವಾಡಲಿ. ಸ್ವಯಂಘೋಷಿತ ಫಕೀರ ಮೋದಿಯವರು ಲಕ್ಷಾಂತರ ಬೆಲೆ ಬಾಳುವ ಸೂಟು ಬೂಟು ಧರಿಸುತ್ತಾರೆ. ಅದು  BJP ಯವರ ಕಣ್ಣಿಗೆ ಕಾಣುವುದಿಲ್ಲವೆ? ' ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ. 

ಈ ಕುರತು ಟ್ವೀಟ್ ಮಾಡಿರುವ ಅವರು,  'BJP ಯವರಿಗೆ ರಾಹುಲ್ ಗಾಂಧಿಯವರ ಉಡುಗೆ ತೊಡುಗೆ ಬಗ್ಗೆ ಮಾತಾಡಲು ಯಾವ ನೈತಿಕತೆಯಿದೆ.?' ಎಂದು ಕಿಡಿಕಾರಿದ್ದಾರೆ. 

'ಫಕೀರ ಎಂದರೆ ಸಂತನ ಪ್ರತಿರೂಪ. ಫಕೀರ ಎಂದು ಕರೆಸಿಕೊಳ್ಳುವವರು ಆಡಂಬರ-ಐಷಾರಾಮಿ ಬದುಕು ಸಾಗಿಸಬಾರದು. BJP ಯವರು ಮೊದಲು ಸ್ವಯಂಘೋಷಿತ ಫಕೀರ ಮೋದಿಯವರಿಗೆ ದುಬಾರಿ ಜೀವನ ತ್ಯಜಿಸಲು ಹೇಳಲಿ. ನಂತರ ರಾಹುಲ್ ಗಾಂಧಿಯವರ ಬಗ್ಗೆ ಮಾತಾಡಲಿ. BJPಯವರ ತಟ್ಟೆಯಲ್ಲೇ ಹೆಗ್ಗಣ ಬಿದ್ದು ಕೊಳೆತು ನಾರುತ್ತಿದೆ. ಹೀಗಿರುವಾಗ ಇನ್ನೊಬ್ಬರ ತಟ್ಟೆಯ ಚಿಂತೆ ಯಾಕೆ.?' ಎಂದು ದಿನೇಶ್ ಗುಂಡೂರಾವ್ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ. 

ಇದನ್ನೂ ಓದಿ: ರಾಹುಲ್‌ ಗಾಂಧಿ ಧರಿಸಿದ ಟಿಶರ್ಟ್‌ ಬೆಲೆಯನ್ನು ಗುರಿಯಾಗಿಸಿದ ಬಿಜೆಪಿ: ತಿರುಗುಬಾಣವಾದ 'ಬೆಲೆ ಅಸ್ತ್ರ'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News