3ವರ್ಷದಲ್ಲಿ 30 ಹಗರಣ, ಬಾಲ ಬೆಳೆಯುತ್ತಲೇ ಇದೆ: ಪಟ್ಟಿ ಬಿಡುಗಡೆಗೊಳಿಸಿ ಸಿಎಂಗೆ ತಿರುಗೇಟು ನೀಡಿದ ರಮೇಶ್ ಬಾಬು

Update: 2022-09-10 14:21 GMT

ಬೆಂಗಳೂರು: ದೊಡ್ಡಬಳ್ಳಾಪುರದ 'ಜನಸ್ಪಂದನ' ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಪಿಸಿಸಿ ವಕ್ತಾರ ರಮೇಶ್ ಬಾಬು ತಿರುಗೇಟು ನೀಡಿದ್ದಾರೆ. 

ಶನಿವಾರ ಟ್ವೀಟ್ ಮಾಡಿರುವ ರಮೇಶ್ ಬಾಬು, ಬಿಜೆಪಿ ಸರಕಾರದ ಹಗರಣಗಳದ್ದು ಎಂದು ಹೇಳಿರುವ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದ್ದಾರೆ. 

''3ವರ್ಷದಲ್ಲಿ 30 ಹಗರಣ!ಹಗರಣ ಬಾಲ ಬೆಳೆಯುತ್ತಲೇ ಇದೆ! ಕಾಂಗ್ರೆಸ್ ತಾಕತ್ತು ದಮ್ಮು ಹಾನಗಲ್ ಉಪ ಚುನಾವಣೆಯಲ್ಲಿ ಜನರೇ ಬೊಮ್ಮಾಯಿಗೆ ತೋರಿಸಿದ್ದಾರೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಪದವಿ ಹರಾಜಿಗಿದೆ ಎನ್ನುವ ಯತ್ನಾಳ್ ಆರೋಪದ ಪಲಾನುಭವಿ ನೀವೇನಾ?'' ಎಂದು ಮುಖ್ಯಮಂತ್ರಿಗಳನ್ನು ಅವರು ಪ್ರಶ್ನೆ ಮಾಡಿದ್ದಾರೆ.  

ಇದನ್ನೂ ಓದಿ: ಈ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಸರಾ ಉದ್ಘಾಟನೆ: ಸಿಎಂ ಬೊಮ್ಮಾಯಿ

'ಬಿಟ್ ಕಾಯಿನ್ ಆರೋಪದಿಂದ 40 ಪರ್ಸೆಂಟ್ ಆರೋಪದವರೆಗೆ ಭ್ರಷ್ಟೋತ್ಸವದ ರೂವಾರಿ ನೀವೇ' ಎಂದು ರಮೇಶ್ ಬಾಬು ಬೊಮ್ಮಾಯಿ  ಅವರ ವಿರುದ್ಧ ಕಿಡಿಕಾರಿದ್ದಾರೆ. 

ರಮೇಶ್ ಬಾಬು ಅವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಹಗರಣಗಳ ಪಟ್ಟಿ ಹೀಗಿದೆ...

1. 79.29 ಕೋಟಿ ಪಾವತಿ ಸಂಬಂಧ PAC ಸಭೆಗೆ ಗೈರಾದ DC ಬಗಾದಿ ಗೌತಮ್

2. ಅಂದಾಜು ಸಮಿತಿ ಸದಸ್ಯರ ಮೇಲೆ ಗುಂಡಾಗಿರಿ ಪ್ರಕರಣ 

3. ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣ

4. ಬೇಡ ಜಂಗಮ ಹೆಸರಿನಲ್ಲಿ ರೇಣುಕಾಚಾರ್ಯ ಸುಳ್ಳು ಜಾತಿ ಪ್ರಮಾಣ ಪತ್ರ

5. ಪಿಎಸ್‌ಐ ಹಗರಣ

6. ಸಾರಿಗೆ ಇಲಾಖೆಯಲ್ಲಿ ಅಕ್ರಮ, ಕಪ್ಪು ಪಟ್ಟಿ ಮತ್ತು ಕ್ರಿಮಿನಲ್ ಆರೋಪ ಇರುವವರಿಗೆ ಎಲ್ 1 ಟೆಂಡ‌ರ್

7. ಪಶು ಸಂಗೋಪನ ಇಲಾಖೆಯಲ್ಲಿ ಪಶು ಆಹಾರ ಖರೀದಿಗೆ ಅನುದಾನ ನೀಡದ ಸರ್ಕಾರ

8. ಅಬಕಾರಿ ಇಲಾಖೆಯಲ್ಲಿ ಗುತ್ತಿಗೆದಾರರಿಂದ ವಸೂಲಿ ಆಗದ 723 ಕೋಟಿ

9. ಗೃಹ ಇಲಾಖೆಯಲ್ಲಿ 5 ವರ್ಷದಲ್ಲಿ 763 ಮಾನವ ಕಳ್ಳಸಾಗಾಣಿಕೆ ಪ್ರಕರಣ

10, ಬಾಲಮಂದಿರದಲ್ಲಿ 485 ಮಕ್ಕಳ ನಾಪತ್ತೆ

11. ಅನ್ನಭಾಗ್ಯ ಕಾರ್ಯಕ್ರಮಕ್ಕೆ ಸರ್ಕಾರದ ಕನ್ನ, ಕಾಳಸಂತೆ ಮಾರಾಟ

12. ಪಠ್ಯ ಪುಸ್ತಕ ಪರಿಷ್ಕರಣೆಯ ಹಗರಣ, ರೋಹಿತ್ ಚಕ್ರತೀರ್ಥ ಅವಾಂತರ

13. ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ IPS ಅಧಿಕಾರಿ ರೂಪ ವಿರುದ್ಧ ಆರೋಪ

14. ಸಂಘ ಪರಿವಾರದ ವನವಾಸಿ ಕಲ್ಯಾಣ ಸಂಸ್ಥೆಗೆ ಆರ್ಥಿಕ ಇಲಾಖೆ ನಡವಳಿಗೆ ವಿರುದ್ಧವಾಗಿ ಜಮೀನು ಹಂಚಿಕೆ

15. ಮೋದಿ ಪುಸ್ತಕ ಬಿಡುಗಡೆಗೆ ಸರ್ಕಾರದ ಹಣ ದುರ್ಬಳಕ

16. ಅಂಗವಿಕಲರಿಗೆ ಅನುದಾನದ ಮೂರು ಚಕ್ರ ವಾಹನ ನೀಡಲು ಮಾಧುಸ್ವಾಮಿ ಆಪ್ತ ಸಹಾಯಕರಿಂದ ಲಂಚ ಬೇಡಿಕೆ,

17. ಸಂಘ ಪರಿವಾರದ ಜನಸೇವಾ ಟ್ರಸ್ಟ್ ಗೆ 100 ಕೋಟಿ ರೂಪಾಯಿ ಮೌಲ್ಯದ 35 ಎಕರೆ ಜಮೀನು ಮಂಜೂರು

18. Rashtrothana ಪರಿಷತ್ ಮತ್ತು ಸಂಘ ಪರಿವಾರದ ಅಂಗ ಸಂಸ್ಥೆಗಳಿಗೆ ರಾಜ್ಯದ್ಯಂತ ಜಮೀನು ಮಂಜೂರು 29, ಎಂಜಿನಿಯರ್ ಕಾಲೇಜು ಗಳಲ್ಲಿ ಸೀಟು ಹಂಚಿಕೆಯ ದಂದೆ, ಹಣ ವಸೂಲಿ ಅಕ್ರಮ ವರ್ಗಾವಣೆ

20. ಐಎಎಸ್ ಮತ್ತು IPS ಅಧಿಕಾರಿಗಳ ಅಸ್ತಿ ವಿವರ ಬಹಿರಂಗ ಪಡಿಸದ ಸರ್ಕಾರ

21. ಕೇಂದ್ರದಿಂದ ಬರದ ಅನುದಾನ ಕಿಸಾನ್ ಸಮ್ಮಾನ್, ಕೃಷಿ ವಿಕಾಸ್, ಬಿಸಿಯೂಟ, ಮಾತೃ ವಂದನಾ ಯೋಜನೆ ಕುಂಟಿತ

22. ಸದಾಶಿವ ಆಯೋಗದ ವರದಿ ಜಾರಿಗೊಳಿಸದ ಸರ್ಕಾರ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸದ ಸರ್ಕಾರ, ನಿಗದಿತ ಸಮಯದಲ್ಲಿ ಸಂಸ್ಥೆಗಳ ಚುನಾವಣೆ ನಡೆಸದ ಸರ್ಕಾರ 23. ಕಲ್ಯಾಣ ಕರ್ನಾಟಕದಲ್ಲಿ 27,735 ಹುದ್ದೆಗಳನ್ನು ಭರ್ತಿ ಮಾಡದ ಸರ್ಕಾರ

24. ಶಾಲಾ ಮಕ್ಕಳಿಗೆ ಸಕಾಲದಲ್ಲಿ ಪಠ್ಯ ಪುಸ್ತಕ, ಶೂ ಸಾಕ್ಸ್ ನೀಡದ ಸರ್ಕಾರ

25, ರಾಜ್ಯದಲ್ಲಿ ಸ್ಮಶಾನಗಳಿಗೆ ಜಾಗ ನೀಡದ ಸರ್ಕಾರಕ್ಕೆ ಹೈ ಕೋರ್ಟ್ ಛೀಮಾರಿ 26. ರಾಜ್ಯದಲ್ಲಿ ಮೊದಲ ಬಾರಿಗೆ ಐಎಎಸ್, IPS ಅಧಿಕಾರಿಯ ಬಂಧನ, ಎಸಿಬಿ ವಿರುದ್ಧ ಚಾಟಿ ಬೀಸಿದ ಹೈಕೋರ್ಟ್‌ ರಾಜ್ಯ ಸರ್ಕಾರದ ಲಂಚ ಆರೋಪಗಳ ಕುರಿತು ಪ್ರಸ್ತಾಪಿಸಿದ ರಾಜ್ಯ ಸರ್ಕಾರ

27. ಬಿಟ್ ಕಾಯಿನ್ ಹಗರಣ, ಬ್ರೆಡ್ ಬ್ಲಾಕಿಂಗ್ ದಂಧೆ, ಪಿಎಸ್‌ಐ ಹಗರಣ, ಸಹಾಯಕ ಪ್ರಧ್ಯಾಪಕರ ನೇಮಕಾತಿ ಹಗರಣ, ಇಂಜಿನಿಯರ್ ಗಳ ನೇಮಕಾತಿ ಹಗರಣ, KPTCL ಹಗರಣ, KPSC ಹಗರಣ, VC ನೇಮಕಾತಿ ಹಗರಣ, ನೀರಾವರಿ ನಿಗಮಗಳಲ್ಲಿ ಅಕ್ರಮ ಟೆಂಡರ್ ಹಗರಣ, ಸಹಕಾರಿ ಸಾಲದ ಹಗರಣ

28. 40% ಕಮಿಷನ್ ಆರೋಪ, ಸಂತೋಷ ಪಾಟೀಲ್‌ ಅತ್ಮಹತ್ಯೆ, KIADB ಸ್ವತ್ತು ಅಡಮಾನ ಮಾಡಿ 2500 ಸಾವಿರ ಕೋಟಿ ಸಾಲ, ಕೃಷಿ

ಇಲಾಖೆಯಲ್ಲಿ ಅಧಿಕಾರಿಗಳ ಮೂಲಕ ಲಂಚ ಸಂಗ್ರಹದ ಆರೋಪ

29. ಕೃಷಿ ಇಲಾಖೆಯ ಉಳಿಕೆ ಅನುದಾನವನ್ನು ಪ್ರಚಾರ ಕಾರ್ಯಕ್ಕೆ ಬಳಕ

30.ಕಾರ್ಮಿಕ ಇಲಾಖೆಯ ಹಗರಣ ಮತ್ತು ದಂದೆ, ಆರೋಗ್ಯ ಇಲಾಖೆಯ ಹಗರಣಗಳು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News