×
Ad

ಇನ್ನು ಮುಂದೆ KSRTC ಸಿಬ್ಬಂದಿಗೆ ತಿಂಗಳ ಮೊದಲ ದಿನದಲ್ಲೇ ಸಂಬಳ

Update: 2022-09-10 20:00 IST
ಸಾಂರರ್ಭಿಕ ಚಿತ್ರ

ಬೆಂಗಳೂರು, ಸೆ.10: ಕೆಸ್ಸಾರ್ಟಿಸಿಯಲ್ಲಿ ಕಾರ್ಯನಿರ್ವಹಿಸುವ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಸೇರಿ ಸಮಸ್ತ ಸಿಬ್ಬಂದಿಗೆ ಪ್ರತಿ ತಿಂಗಳ 1ರಂದೇ ವೇತನವನ್ನು ಪಾವತಿ ಮಾಡುವುದಾಗಿ ನಿಗಮವು ತೀರ್ಮಾನಿಸಿದ್ದು, ಕಾರ್ಮಿಕರಿಗೆ ಸಿಹಿಸುದ್ದಿ ನೀಡಿದೆ.

ಕೋವಿಡ್ ಕಾರಣದಿಂದಾಗಿ ನಿಗಮದ ಆರ್ಥಿಕ ಪರಿಸ್ಥಿತಿಯು ಕ್ಲಿಷ್ಟಕರವಾಗಿದ್ದು, ನಿಗಮದ ಸಮಸ್ತ ಕಾರ್ಮಿಕ ಸಿಬ್ಬಂದಿಗಳ ಹಿತದೃಷ್ಟಿಯಿಂದ ಈ ನೂತನ ಉಪಕ್ರಮವನ್ನು ಜಾರಿಗೊಳಿಸಲಾಗಿದೆ. ವೇತನ ಪಾವತಿಗಾಗಿ ತಿಂಗಳಿನ ದಿನಾಂಕ 20 ರಿಂದ 30ರವರೆಗೆ, ಊಹಾತ್ಮಕ ಹಾಜರಾತಿ ಪರಿಗಣಿಸುವ ಕಾರಣ, ಸಿಬ್ಬಂದಿಗಳು ಈ ಅವಧಿಯಲ್ಲಿ ಅನಧಿಕೃತ ಗೈರು ಹಾಜರಿ ಹಾಗೂ ಅತಿ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ, ರಜೆಯನ್ನು ಪಡೆಯದೆ ಕರ್ತವ್ಯಕ್ಕೆ ಹಾಜರಾಗಬೇಕು. ಇದರಿಂದ ಪೂರ್ಣ ಸಂಬಳ ಪಡೆಯಲು ಅನುಕೂಲ ಆಗುತ್ತದೆ. ಹಾಗಾಗಿ ನಿಗಮದ ಈ ಕ್ರಮಕ್ಕೆ ಸಕಾರಾತ್ಮಕವಾಗಿ ಸಹಕರಿಸುವಂತೆ ಕಾರ್ಮಿಕರಿಗೆ ತಿಳಿಸಿದೆ.

ಇನ್ನು ಕೆಸ್ಸಾರ್ಟಿಸಿ ಪ್ರತಿ ತಿಂಗಳು ಒಂದೊಂದು ಅಭಿಯಾನವನ್ನು ಆಯೋಜಿಸುತ್ತಿದ್ದು, ಸೆಪ್ಟೆಂಬರ್ ನಲ್ಲಿ ‘ಸ್ವಚ್ಛತೆ ಮತ್ತು ವಾಹನ ನಿರ್ವಾಹಣಾ’ ಅಭಿಯಾನವನ್ನು, ಅಕ್ಟೋಬರ್‍ನಲ್ಲಿ ‘ಸಾರಿಗೆ ಆದಾಯ ಹೆಚ್ಚಿಸುವುದು ಮತ್ತು ಅಪಘಾತರಹಿತ’ ಮಾಸಾಚರಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿಗಮವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News