×
Ad

ಒಂದಡಿ ನೀರಿನಲ್ಲಿ ಬಿಜೆಪಿ ಶಾಸಕ ಎನ್. ಮಹೇಶ್ ತೆಪ್ಪ ಸವಾರಿ: ಸಾಮಾಜಿಕ ಜಾಲತಾಣದಲ್ಲಿ ಟೀಕೆ

Update: 2022-09-10 23:45 IST

ಚಾಮರಾಜನಗರ: ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲು ಶಾಸಕ ಎನ್.ಮಹೇಶ್ ಅವರು  ಒಂದಡಿ ನೀರಿನಲ್ಲಿ ತೆಪ್ಪದ ಮೂಲಕ ತೆರಳಿ ಟೀಕೆಗೆ ಗುರಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ನಡೆದಿದೆ.

ಅರ್ಧ ಅಡಿ ನೀರಲ್ಲಿ ತೆಪ್ಪ ಸವಾರಿ ನಡೆಸಿರುವ ಶಾಸಕರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ‌ ಮಾಂಬಳ್ಳಿ ಗ್ರಾಮದಲ್ಲಿ ಕಳೆದ ವಾರ ಸುವರ್ಣಾವತಿ ಹಾಗುಇ ಚಿಕ್ಲಹೊಳೆ ಜಲಾಶಯ ದಿಂದ ಹೊರ ಬಿಟ್ಟ ಅಪಾರ ಪ್ರಮಾಣದ ನೀರಿನಿಂದ ಮಾಂಬಳ್ಳಿ ಗ್ರಾಮದ ಹೆದ್ದಾರಿಯಲ್ಲಿ ಮುಕ್ಕಾಲು ಅಡಿ ನೀರು ಹರಿಯುತ್ತಿದ್ದು, ಆ ನೀರಿನಲ್ಲಿ ತೆಪ್ಪದ ಮೇಲೆ ಕುಳಿತ ಶಾಸಕ ಎನ್‌ಮಹೇಶ್ , ಮಾಂಬಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಾದೇಗೌಡ ಮತ್ತು ಬಿಜೆಪಿ ಮುಖಂಡ ಮಾಂಬಳ್ಳಿ ನಂಜುಂಡ ಸ್ವಾಮಿ ಕುಳಿತು ಬೆಂಬಲಿಗರ  ಮೂಲಕ ತೆಪ್ಪ ಎಳಸಿಕೊಂಡು ಹೋದ ವೀಡಿಯೋ ಇದೀಗ ವೈರಲ್ ಆಗಿದ್ದು, ಶಾಸಕರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವೂ ವ್ಯಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News