ಕಲಬುರಗಿ | ಗಣೇಶೋತ್ಸವ ಮೆರವಣಿಗೆ ವೇಳೆ ಮಸೀದಿ ಬಳಿ ಪ್ರಚೋದನಕಾರಿ ಹಾಡು: ಸ್ವಯಂ ಪ್ರೇರಿತ ಪ್ರಕರಣ ದಾಖಲು

Update: 2022-09-12 15:00 GMT

ಕಲಬುರಗಿ: ನಗರದ ಮಸೀದಿ ಒಂದರ ಬಳಿ ಶನಿವಾರ ತಡ ರಾತ್ರಿ ಧ್ವನಿ ವರ್ಧಕ ನಿಯಮ ಉಲ್ಲಂಘನೆ ಮತ್ತು ಪ್ರಚೋದನಕಾರಿ ಹಾಡು ಹಾಕಿದ ಆರೋಪದ ಹಿನ್ನೆಲೆಯಲ್ಲಿ ಬ್ರಹ್ಮಪುರ ಪೊಲೀಸರು  ಹೆಚ್ಚು ಜನರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಭೂವಿ ಸಮಾಜ ಗಣೇಶ್ ಮಂಡಳಿಯ ಪದಾಧಿಕಾರಿ ತುಕಾರಾಮ ಮಹೇಂದ್ರಕರ್, ಅಂಬ್ರೆಶ್ ಭೂವಿ, ಮತ್ತು ಡಿಜೆ ಮಾಲಕ ಸೋಲಾಪುರ ಸಲೀಮ್ ಸೇರಿದಂತೆ ಹಲವರ ಮೇಲೆ ದೂರು ದಾಖಲಾಗಿದೆ. 

ಶನಿವಾರ ತಡ ರಾತ್ರಿ ಹಳೆ ಭೂವಿ ಗಲ್ಲಿಯಿಂದ ಸರಾಫ್ ಬಝಾರ್ ಮಾರ್ಗವಾಗಿ ಅಪ್ಪನ ಕರೆಯಲ್ಲಿ ಗಣೇಶ್ ಮೂರ್ತಿ ವಿಸರ್ಜನೆಗೆಂದು ಮೆರವಣೆಗೆ ಹೋಗುವ ವೇಳೆಯಲ್ಲಿ ಮಹೆಬಸ್ ಮಸ್ಜಿದ್ ಹತ್ತಿರ ಕೋಮುಭಾವನೆ ಕೆರಳಿಸುವಂತಹ ಪ್ರಚೋದನಕಾರಿ ಹಾಡು ಹಾಕಿ ಸಂಭ್ರಮಿಸಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ರವಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News