ಮುಹಮ್ಮದ್ ಗೌಸ್ ಶುಕೂರ್ ಕಮಾಲ್ ಸೇರಿ ಕರ್ನಾಟಕ ಹೈಕೋರ್ಟ್ ನ ಮೂವರು ನ್ಯಾಯಮೂರ್ತಿಗಳು ಖಾಯಂ ಆಗಿ ನೇಮಕ
Update: 2022-09-13 10:35 IST
ಬೆಂಗಳೂರು, ಸೆ.12: ಕರ್ನಾಟಕ ಹೈಕೋರ್ಟ್ ನಲ್ಲಿ (High Court of Karnataka) ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 3 ಮಂದಿ ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಿ ಸುಪ್ರೀಂಕೋರ್ಟ್ ಕೊಲಿಜಿಯಂ 2022ರ ಸೆ.7ರಂದು ಅಧಿಸೂಚನೆ ಹೊರಡಿಸಿದೆ.
ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್, ನ್ಯಾ.ಖಾಝಿ ಜೈಬುನ್ನಿಸಾ ಮೊಹಿಯುದ್ದೀನ್, ನ್ಯಾ.ಮುಹಮ್ಮದ್ ಗೌಸ್ ಶುಕೂರ್ ಕಮಾಲ್ ಅವರನ್ನು ಖಾಯಂ ನ್ಯಾಯಮೂರ್ತಿಗಳಾಗಿ ರಾಜ್ಯ ಹೈಕೋರ್ಟ್‍ಗೆ ನೇಮಕ ಮಾಡಲಾಗಿದೆ.
ವಕ್ಫ್ ವಿಷಯದಲ್ಲಿ ನ್ಯಾ.ಗೌಸ್ ಪರಿಣಿತಿ: ಮುಹಮ್ಮದ್ ಗೌಸ್ ಶುಕೂರ್ ಕಮಾಲ್ ಸುಮಾರು 23 ವರ್ಷಗಳ ಕಾಲ ಕರ್ನಾಟಕ ಹೈಕೋರ್ಟ್ ಮತ್ತು ಅದರ ಅಡಿಯಲ್ಲಿ ಬರುವ ಕೋರ್ಟ್‍ಗಳಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಮುಹಮ್ಮದ್ ಗೌಸ್ ಅವರು ಕೊಡಗಿನ ಕೊಡ್ಲಿಪೇಟೆ ಮೂಲದವರಾಗಿದ್ದು, ಸಿವಿಲ್, ಕ್ರಿಮಿನಲ್, ಸಂವಿಧಾನ, ಕಾರ್ಮಿಕ, ಕಂದಾಯ ಹಾಗೂ ವಕ್ಫ್ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದಾರೆ.