ಭಾಷೆ ಹೇರಿಕೆಯ ಹಿಂದಿನ RSS ಕುತಂತ್ರ ನಡೆಯಲ್ಲ: ಬಿ.ಕೆ ಹರಿಪ್ರಸಾದ್

Update: 2022-09-14 07:21 GMT

ಬೆಂಗಳೂರು: ಹಿಂದಿ ಭಾಷೆ ಹೇರಿಕೆಯ ವಿಚಾರದ ಕುರಿತು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್,  ಭಾಷೆ ಹೇರಿಕೆಯ ಹಿಂದಿನ RSSನ ಕುತಂತ್ರ, ಸಾವಿರಾರು ಭಾಷೆಗಳಿಗೆ ಜನ್ಮಕೊಟ್ಟ ಈ ನೆಲದಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಾನು ಸದಾ ಭಾಷೆ ಕಲಿಯುವ ವಿದ್ಯಾರ್ಥಿ.ಆರು ಭಾಷೆ ಮಾತಾಡುತ್ತೇನೆ. ಹಲವು ಭಾಷೆಗಳನ್ನ ಅರ್ಥ ಮಾಡಿಕೊಳ್ಳುತ್ತೇನೆ. ಹಿಂದಿ ಸೇರಿದಂತೆ ಎಲ್ಲ ಭಾಷೆಯ ಮೇಲೆ ಗೌರವ ಇದೆ, ಹಾಗೇ ಹಿಂದಿ ಹೇರಿಕೆಯ ವಿರುದ್ಧ ನನ್ನ ಧಿಕ್ಕಾರವಿದೆ' ಎಂದು ತಿಳಿಸಿದ್ದಾರೆ.

''ಅನ್ನಪೂರ್ಣ ಕ್ಯಾಂಟೀನ್ ಯೋಜನೆ ಪತ್ತೆ ಇಲ್ಲ''

'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹಸಿವಿನ ಬೆಲೆ ಹಸಿದವನಿಗೆ ಮಾತ್ರ ಗೊತ್ತೇ ಹೊರತು, 40% ಕಮಿಷನ್ ಹೊಡೆದವರಿಗಲ್ಲ. ಅನ್ನ ನೀಡುವ ಇಂದಿರಾ ಕ್ಯಾಂಟೀನ್ ಗೆ ಅನುದಾನ ನೀಡುತ್ತಿಲ್ಲ, ತಾವೇ ಘೋಷಿಸಿದ ಅನ್ನಪೂರ್ಣ ಕ್ಯಾಂಟೀನ್ ಯೋಜನೆ ಪತ್ತೆ ಇಲ್ಲ. ನಾಗರಿಕರು ಕೇಳುತ್ತಿದ್ದಾರೆ. 

'ಬಡವರ ಮೂರೊತ್ತಿನ ಊಟದ ಮೇಲೇಕೆ ಇಷ್ಟೊಂದು ಮತ್ಸರ.?' ಎಂದು ಬಿಜೆಪಿಯನ್ನು ಬಿ.ಕೆ ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News