ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ, ಕನ್ನಡಕ್ಕೆ ಮೊದಲ ಪೂಜೆ: ಹಿಂದಿ ದಿವಸ್‌ ಆಚರಣೆಗೆ ಸಿದ್ದರಾಮಯ್ಯ ವಿರೋಧ

Update: 2022-09-14 07:40 GMT

ಬೆಂಗಳೂರು: ಸೆಪ್ಟೆಂಬರ್ 14ರಂದು ಕೇಂದ್ರ ಸರ್ಕಾರದ ಹಿಂದಿ ದಿವಸ್‌ ಆಚರಣೆಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು,  'ಯಾವ ಭಾಷೆಯ ಕಲಿಕೆಯನ್ನೂ ವಿರೋಧಿಸುವುದಿಲ್ಲ, ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ. ಕನ್ನಡ‌ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ. ಕೇಂದ್ರದ ಬಿಜಪಿ ಸರ್ಕಾರ ಹಿಂದಿ ದಿವಸ ಆಚರಿಸಿ ಹಿಂದಿ ಭಾಷೆಯ ಹೆಸರಲ್ಲಿ ಆರ್ ಎಸ್ ಎಸ್ ಪ್ರಣೀತ ಹಿಂದುತ್ವ ಹೇರುವುದನ್ನು ನಾನು ಖಂಡಿಸುತ್ತೇನೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಹಿಂದಿ ದಿವಸ’ ಆಚರಿಸದಂತೆ ಸಿಎಂ ಬೊಮ್ಮಾಯಿಗೆ ಕುಮಾರಸ್ವಾಮಿ ಪತ್ರ

---------------------------------------------------------------------------

ಭಾಷೆ ಹೇರಿಕೆಯ ಹಿಂದಿನ RSS ಕುತಂತ್ರ ನಡೆಯಲ್ಲ: ಬಿ.ಕೆ ಹರಿಪ್ರಸಾದ್ 

''ಭಾಷೆ ಹೇರಿಕೆಯ ಹಿಂದಿನ RSSನ ಕುತಂತ್ರ, ಸಾವಿರಾರು ಭಾಷೆಗಳಿಗೆ ಜನ್ಮಕೊಟ್ಟ ಈ ನೆಲದಲ್ಲಿ ನಡೆಯುವುದಿಲ್ಲ. ನಾನು ಸದಾ ಭಾಷೆ ಕಲಿಯುವ ವಿದ್ಯಾರ್ಥಿ.ಆರು ಭಾಷೆ ಮಾತಾಡುತ್ತೇನೆ. ಹಲವು ಭಾಷೆಗಳನ್ನ ಅರ್ಥ ಮಾಡಿಕೊಳ್ಳುತ್ತೇನೆ. ಹಿಂದಿ ಸೇರಿದಂತೆ ಎಲ್ಲ ಭಾಷೆಯ ಮೇಲೆ ಗೌರವ ಇದೆ, ಹಾಗೇ ಹಿಂದಿ ಹೇರಿಕೆಯ ವಿರುದ್ಧ ನನ್ನ ಧಿಕ್ಕಾರವಿದೆ''

- ಬಿ.ಕೆ ಹರಿಪ್ರಸಾದ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News