×
Ad

BJP ಸರ್ಕಾರದ ಹಗರಣಗಳ ಸರಮಾಲೆ ನಿಲ್ಲುವಂತೆ ಕಾಣುತ್ತಿಲ್ಲ: ರಣದೀಪ್ ಸಿಂಗ್ ಸುರ್ಜೇವಾಲಾ

Update: 2022-09-14 15:30 IST

ಬೆಂಗಳೂರು: ರಾಜ್ಯ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, (Randeep Surjewala) ಬಿಜೆಪಿ (BJP) 'ಸರ್ಕಾರದ ಹಗರಣಗಳ ಸರಮಾಲೆ ನಿಲ್ಲುವಂತೆ ಕಾಣುತ್ತಿಲ್ಲ' ಎಂದು ಕಿಡಿಕಾರಿದ್ದಾರೆ. 

ಈ ಕುರಿತು 'ವಾರ್ತಾಭಾರತಿ'ಯಲ್ಲಿ ಬುಧವಾರ ಪ್ರಕಟವಾದ ವಿಶೇಷ ವರದಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು,  'ಸದ್ಯಕ್ಕೆ BJP ಸರ್ಕಾರದ ಹಗರಣಗಳ ಸರಮಾಲೆ ನಿಲ್ಲುವಂತೆ ಕಾಣುತ್ತಿಲ್ಲ ಆ ಪಟ್ಟಿಗೆ ಹೊಸ ಸೇರ್ಪಡೆ PHD ಪ್ರವೇಶ ಪರೀಕ್ಷೆ ಹಗರಣ PSI ಹಗರಣದಲ್ಲೂ ಸಚಿವ ಅಶ್ವತ್ಥ ನಾರಾಯಣ ಅವರ ಹೆಸರು ಕೇಳಿ ಬಂದಿತ್ತು. ಈಗ ಅವರದೇ ಇಲಾಖೆಯಲ್ಲಿ ಅಕ್ರಮ ನಡೆದಿದೆ' ಎಂದು ಹೇಳಿದ್ದಾರೆ. 

'ಈಗಲಾದರೂ ನಿಷ್ಪಕ್ಷಪಾತ ತನಿಖೆ ನಡೆಸುತ್ತೀರೋ? ಅಥವಾ PSI ಹಗರಣದಂತೆ ಹಳ್ಳ ಹಿಡಿಸುತ್ತೀರೋ?' ಎಂದು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡಿದ್ದಾರೆ. 

ಇದನ್ನೂ ಓದಿ: ಬಿಎಸ್‌ ವೈ, ಕುಟುಂಬದ ಸದಸ್ಯರು, ಸಚಿವ ಸೋಮಶೇಖರ್‌ ವಿರುದ್ಧ FIR ದಾಖಲಿಸಿ, ತನಿಖೆ ನಡೆಸಲು ಕೋರ್ಟ್ ಸೂಚನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News