ಬಿ.ಕೆ.ಹರಿಪ್ರಸಾದ್ ಕ್ರೈಸ್ತರಾದರೆ ನಮ್ಮದೇನೂ ತಕರಾರಿಲ್ಲ: ಸಚಿವ ಮಾಧುಸ್ವಾಮಿ

Update: 2022-09-15 16:03 GMT

ಬೆಂಗಳೂರು, ಸೆ.15: ಸ್ವಂತ ಇಚ್ಛೆಯಿಂದ ಯಾರು ಬೇಕಾದರೂ ಮತಾಂತರ ಆಗಬಹುದು. ಬೇಕಾದರೆ ಬಿ.ಕೆ.ಹರಿಪ್ರಸಾದ್ ಅವರು ಕ್ರಿಶ್ಚಿಯನ್ ಆಗಿ ಹೋದರೆ ನಮ್ಮದೇನೂ ತಕರಾರಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ವ್ಯಂಗ್ಯವಾಡಿದರು.

ಗುರುವಾರ ವಿಧಾನಪರಿಷತ್ತಿನಲ್ಲಿ ಭೋಜನ ವಿರಾಮದ ಬಳಿಕ ಮತಾಂತರ ನಿಷೇಧ ವಿಧೇಯಕ ಚರ್ಚೆಯಲ್ಲಿ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಸ್ತಾಪಿಸಿ ಹಿಂದೂ ಧರ್ಮದ ರಕ್ಷಣೆಗೆ ಮಸೂದೆಯನ್ನು ತರಲಾಗಿದೆ ಎಂದರು.

ಇದಕ್ಕೆ ಉತ್ತರಿಸಿದ ಸಚಿವರು, ಇದು ಹಿಂದೂ ಧರ್ಮ ಮಾತ್ರವಲ್ಲ. ಎಲ್ಲ್ಲ ಧರ್ಮದವರ ರಕ್ಷಣೆ ತರಲಾಗಿದೆ. ಮಸೂದೆಯಲ್ಲಿ ಬಲವಂತದ ಮತಾಂತರವನ್ನು ಮಾತ್ರ ನಿಷೇಧಿಸಲಾಗಿದೆ. ಪ್ರೀತಿ, ಹಣ, ಶಿಕ್ಷಣ, ಉದ್ಯೋಗ ಈ ರೀತಿ ಆಮಿಷ ಒಡ್ಡಿ ಅಶಕ್ತರನ್ನು ಮತಾಂತರ ಮಾಡುವಂತಿಲ್ಲ ಎಂದರು.

ಇನ್ನೂ, ಮುಸ್ಲಿಮ್ ವ್ಯಕ್ತಿಯನ್ನು ಬಲವಂತವಾಗಿ ಹಿಂದೂ ಧರ್ಮಕ್ಕೆ ಮತಾಂತರ ಮಾಡಿದರೆ ಪ್ರಕರಣ ದಾಖಲಿಸಬಹುದು. ಈ ಎಲ್ಲ ಅಂಶಗಳು ಮಸೂದೆಯಲ್ಲಿದೆ. ಜತೆಗೆ, ಸ್ವಂತ ಇಚ್ಛೆಯಿಂದ ಯಾರು ಬೇಕಾದರೂ ಮತಾಂತರ ಆಗಬಹುದು. ಬೇಕಾದರೆ ಬಿ.ಕೆ.ಹರಿಪ್ರಸಾದ್ ಅವರು ಕ್ರಿಶ್ಚಿಯನ್ ಆದರೆ ನಮ್ಮದೇನೂ ತಕರಾರಿಲ್ಲ ಏನು ಇಲ್ಲ. ಆದರೆ ಒಂದು ಅರ್ಜಿ ಕೊಟ್ಟರೆ ಆಯಿತು ಎಂದು ನುಡಿದರು.

ಇದನ್ನೂ ಓದಿ:  ವಿಪಕ್ಷಗಳ ಭಾರೀ ವಿರೋಧದ ಮಧ್ಯೆ ಮತಾಂತರ ನಿಷೇಧ ವಿಧೇಯಕಕ್ಕೆ ಪರಿಷತ್ತಿನಲ್ಲಿ ಅಂಗೀಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News