ಬಿಟ್ ಕಾಯಿನ್ ಹಗರಣ ನಿಷ್ಪಕ್ಷಪಾತ ತನಿಖೆ: ಸಚಿವ ಆರಗ ಜ್ಞಾನೇಂದ್ರ

Update: 2022-09-15 18:16 GMT

ಬೆಂಗಳೂರು, ಸೆ.15: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಬಿಟ್ ಕಾಯಿನ್ ಹಗರಣದ ತನಿಖೆಗೆ ಸರಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. 

ಗುರುವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಾಧಾರ ನೀಡಿದರೆ ಪ್ರಾಮಾಣಿಕವಾಗಿ ತನಿಖೆ ನಡೆಸಲು ಸರಕಾರ ಸಿದ್ಧವಿದೆ ಎಂದು ಹೇಳಿದರು. 
ಅಂತರ್‍ರಾಷ್ಟ್ರೀಯ ಹ್ಯಾಕರ್ ಶ್ರೀಕಿಯನ್ನು ಬಂಧಿಸಿ ಈಗಾಗಲೇ ವಿಚಾರಣೆ ನಡೆಸಲಾಗಿದೆ. ಈ ತಂತ್ರಜ್ಞಾನ ನಮ್ಮ ಪೆÇಲೀಸರಿಗೂ ಹೊಸದು, ತಜ್ಞರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಎಂದರು.

ಅಮೇರಿಕಾದಿಂದ ದೇಶದಲ್ಲಿ ಬಿಟ್ ಕಾಯಿನ್ ನಡೆಯುತ್ತಿದೆ ಎನ್ನುವ ಯಾವುದೇ ಸೂಚನೆ ಅಥವಾ ಸಲಹೆ ಬಂದಿಲ್ಲ. ಆದರೆ ಅಮೇರಿಕಾದಲ್ಲಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ. ಸಾವಿರಾರು ಕೋಟಿ ರೂಪಾಯಿ ಹಗರಣ ಎನ್ನುತ್ತೀರಾ ಹಾಗಾದರೆ ಹಣ ಕಳೆದುಕೊಂಡವರು ದೂರು ನೀಡಬೇಕಾಗಿತ್ತಲ್ಲ. ಆದರೆ ಯಾರೂ ಕೂಡ ದೂರು ನೀಡಿಲ್ಲ. ವಂಚನೆ ಆಗಿದ್ದರೆ, ಸಾಕ್ಷ ಇದ್ದರೆ ದಾಖಲೆ ಕೊಡಿ ತನಿಖೆ ಮಾಡೋಣ ಎಂದರು. 

ಹರಿಪ್ರಸಾದ್ ಆರೋಪ: ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಗರಣ ಇದು. ಇದರಲ್ಲಿ ರಾಜಕಾರಣಿಗಳು, ದೊಡ್ಡ ದೊಡ್ಡ ಕುಳಗಳು ಇದ್ದಾರೆ ಎಂದು ವಿಧಾನಪರಿಷತ್ ಪ್ರತಿ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಆರೋಪಿಸಿದರು. ನಮ್ಮನ್ನು ಸಾಕ್ಷಿ ಕೇಳುವುದಾದರೆ ಸರಕಾರ ಇರುವುದು ಯಾಕೆ. ಮೇಲ್ನೋಟಕ್ಕೆ ಆರೋಪಿ ವಿರುದ್ದ ಪೊಲೀಸರ ಬಳಿ ಸಾಕ್ಷಿ ಇದೆ. ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News