ಮುರುಘಾಶ್ರೀ ವಿರುದ್ಧ ಪತ್ರ ಬರೆದಿದ್ದು ನಾವಲ್ಲ: ಮುರುಘಾಮಠದ ನೌಕರರ ಸ್ಪಷ್ಟನೆ

Update: 2022-09-16 17:12 GMT

ಚಿತ್ರದುರ್ಗ, ಸೆ.16: ಇತ್ತೀಚೆಗೆ ಎಸ್.ಜೆ.ಎಂ. ನೌಕರರು ಬರೆದಿದ್ದಾರೆ ಎನ್ನಲಾದ 6 ಪುಟಗಳ ಪತ್ರವೊಂದು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ಪತ್ರವನ್ನು ನಾವು ಯಾರೂ ಬರೆದಿರುವುದಿಲ್ಲ. ಅಂತಹ ಸಂದರ್ಭವೂ ನಮಗೆ ಒದಗಿ ಬಂದಿರುವುದಿಲ್ಲ ಎಂದು ಮುರುಘಾಮಠದ ನೌಕರರು ಸ್ಪಷ್ಟಪಡಿಸಿದ್ದಾರೆ.

ಮುರುಘಾಮಠದ ಅನುಭವ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವೇಶ್ವರ ಆಸ್ಪತ್ರೆಯ ಅಧೀಕ್ಷಕ ಡಾ.ಪಾಲಾಕ್ಷಪ್ಪ, 'ಸಂಸ್ಥೆಯಲ್ಲಿ ದಾಸೋಹ ಮಾಡುತ್ತಿರುವ ನಾವು ಶ್ರೀಮಠದ ಬಗ್ಗೆ ನಮ್ಮ ವಿದ್ಯಾಪೀಠದ ಬಗ್ಗೆ ಅಪಾರ ಭಕ್ತಿ ಮತ್ತು ಗೌರವವನ್ನು ಇಟ್ಟುಕೊಂಡಿದ್ದೇವೆ. ನಮ್ಮಂತಹ ಸಾವಿರಾರು ನೌಕರರು ಹಾಗೂ ಅವರನ್ನು ನಂಬಿದ ಕುಟುಂಬ ವರ್ಗದವರು ಶ್ರೀಮಠದ ಆಶ್ರಯದಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ನಮಗೆ ಎಂತಹ ಸಂಕಷ್ಟ ಎದುರಾದರೂ ಶ್ರೀಮಠದ ಹಾಗೂ ವಿದ್ಯಾಪೀಠದ ಜೊತೆ ಇರುತ್ತೇವೆ. ಮಾತ್ರವಲ್ಲ, ಲಕ್ಷಾಂತರ ಭಕ್ತರು ಜೊತೆಗಿದ್ದಾರೆ. ಇಂತಹ ಅನಾಮಧೇಯ ಪತ್ರಗಳಿಗೆ ನೌಕರರು ಹಾಗೂ ಭಕ್ತರು, ಮಾಧ್ಯಮದವರು ದಯವಿಟ್ಟು ಬೆಲೆ ಕೊಡಬಾರದು' ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಜೆಎಂ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಆರ್.ಗೌರಮ್ಮ, ಎಸ್‌ಜೆಎಂ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ನಾಗರಾಜ್, ಎಸ್‌ಜೆಎಂ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‌ನ ಪ್ರಾಂಶುಪಾಲೆ ಡಾ. ಸವಿತಾರೆಡ್ಡಿ, ಜೆಎಂಐಟಿ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಭರತ್, ಎಸ್‌ಜೆಎಂ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ದಿನೇಶ್, ಎಸ್‌ಜೆಎಂ ಐಟಿಐ ಕಾಲೇಜಿನ ಪ್ರಾಚಾರ್ಯ ಬೋರೇಶ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಚಿತ್ರದುರ್ಗ| ಸಂತ್ರಸ್ತ ಬಾಲಕಿಯರನ್ನು ಮಾನಸಿಕ ರೋಗಿಗಳೆಂದು ಬಿಂಬಿಸಿ ಆರೋಪಿಗಳ ರಕ್ಷಣೆಗೆ ಷಡ್ಯಂತ್ರ: ನೈಜ ಹೋರಾಟಗಾರರ ವೇದಿಕೆ ಶಂಕೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News