×
Ad

ಮಂಡ್ಯ: ಪಾಳು ಬಾವಿಯಲ್ಲಿ ನವಜಾತ ಶಿಶು ಪತ್ತೆ

Update: 2022-09-17 10:24 IST

ಮಂಡ್ಯ: ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದ ಸಮೀಪ ಪಾಳು ಬಾವಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ.  

ಚಂದ್ರೆ ಗ್ರಾಮದ ಮಹಿಳೆಯೊಬ್ಬರು ಜಮೀನಿಗೆಂದು ತೆರಳುತ್ತಿದ್ದಾಗ ಮಗುವಿನ ಅಳುವಿನ ಧ್ವನಿ  ಕೇಳಿ ಬಂದಿದೆ.  ಈ ವೇಳೆ ಸ್ಥಳೀಯರು ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಬಳಿಕ ಮಗುವನ್ನು ರಕ್ಷಿಸಿದ  ಗ್ರಾಮಸ್ಥರು ಹಾಗೂ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಕ್ಷಣ ತುರ್ತುವಾಹನದ ಮೂಲಕ ಪಾಂಡವಪುರ ಟೌನ್ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 

ಪಾಂಡವಪುರ ಆಸ್ಪತ್ರೆಯಲ್ಲಿ ಮಗುವಿನ ಆರೋಗ್ಯ ತಪಾಸಣೆ ಬಳಿಕ, ಕಾನೂನು ಅನ್ವಯ ಮಂಡ್ಯ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಗುವಿನ ತಾಯಿ ಯಾರು, ಏಕೆ ಮಗುವನ್ನು ಪಾಳು  ಬಾವಿಗೆ ಬಿಸಾಡಿದ್ದಾರೆ ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News