ನ್ಯಾಮತಿ | ಸಾರ್ವಜನಿಕರ ಎದುರು ನಿಂದಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ: ದೂರು ದಾಖಲು

Update: 2022-09-17 16:09 GMT

ನ್ಯಾಮತಿ: ನೆರಮನೆ ವ್ಯಕ್ತಿಗಳು ವಿನಾಕಾರಣ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದರಿಂದ ಮನನೊಂದ ಮಹಿಳೆ ನೇಣಿಗೆ ಶರಣಾದ ಘಟನೆ ತಾಲೂಕಿನ ಬೆಳಗುತ್ತಿ ಗ್ರಾಮದ ಎ.ಕೆ ಕಾಲೋನಿಯಲ್ಲಿ ಬುಧವಾರ ನಡೆದಿದೆ

ನಾಗರತ್ನ(31)ಮೃತ ಮಹಿಳೆ ಎಂದು ತಿಳಿದು ಬಂದಿದೆ. ಗ್ರಾಮದ ಗಣೇಶ ವಿಸರ್ಜನೆ ವೇಳೆ ಅದೇ ಗ್ರಾಮದ ಮಧು ಮತ್ತು ಮೀನಾಕ್ಷಮ್ಮ ಎಂಬುವರು ಕಾರಣವಿಲ್ಲದೆ ಸಾರ್ವಜನಿಕರ ಎದುರೇ ಅವಾಚ್ಯವಾಗಿ ನಿಂದಿಸಿದಲ್ಲದೆ, ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದ ನಾಗರತ್ನ, ನೇಣಿಗೆ ಶರಣಾಗಿದ್ದಾರೆ. 

ಸಾವಿಗೆ ಕಾರಣರಾದ ಮಧು ಮತ್ತು ಮೀನಾಕ್ಷಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತಳ ತಾಯಿ ಸುನಿತಾ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ಥಳಕ್ಕೆ ನ್ಯಾಮತಿ ಪಿಎಸ್‌ಐ. ಪಿ.ಎಸ್. ರಮೇಶ್ ಭೇಟಿ ನೀಡಿ ಪರಿಶೀಲಿಸಿದರು. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕಬೂದಿಹಾಳ್ ಗ್ರಾಮದ ನಾಗರತ್ನ 6 ವರ್ಷ ಹಿಂದೆ ಬೆಳಗುತ್ತಿ ಗ್ರಾಮದ ವ್ಯಕ್ತಿಯನ್ನು ವಿವಾಹವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News