ವಿಧಾನ ಸೌಧ ಈಗ ವ್ಯಾಪಾರ ಸೌಧ, 40% ಕಮಿಷನ್ ಕಡ್ಡಾಯ: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Update: 2022-09-17 16:40 GMT
 ಪ್ರಿಯಾಂಕ್ ಖರ್ಗೆ 

ಬೆಂಗಳೂರು: ರಾಜ್ಯ ಬಿಜೆಪಿ ಸರಕಾರ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ,  ವಿಧಾನಸೌಧ ಈಗ ವ್ಯಾಪಾರ ಸೌಧವಾಗಿದೆ' ಎಂದು ಆರೋಪಿಸಿದ್ದಾರೆ.

ಈ ಕುರಿರು ಟ್ವೀಟ್ ಮಾಡಿರುವ ಅವರು,  ಮುಖ್ಯಮಂತ್ರಿ ಹುದ್ದೆ 2500 ಕೋಟಿ ರೂ.ಗೆ ಬಿಕರಿಯಾಗುವ ಈ ವ್ಯಾಪಾರ ಸೌಧದಲ್ಲಿ  ಶಾಸಕಾಂಗಡಿಯಲ್ಲಿ ಶಾಸಕರ ಖರೀದಿಸಲಾಗುತ್ತದೆ. ಕಾರ್ಯಾಂಗಡಿಯಲ್ಲಿ ಸರ್ಕಾರಿ ಹುದ್ದೆಗಳ ಮಾರಾಟವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

''40% ಕಮಿಷನ್ ಕಡ್ಡಾಯವಾಗಿದೆ ,ಆಪರೇಷನ್ ಕಮಲಕ್ಕೆ ಹಾಕಿದ ಬಂಡವಾಳಕ್ಕೆ ಭರ್ಜರಿ ಲಾಭದ ಫಸಲು ತೆಗೆಯಲಾಗುತ್ತದೆ' ಎಂದು ಸರಕಾರ ವಿರುದ್ಧ ಪ್ರಿಯಾಂಕ್ ಖರ್ಗೆ ಟ್ವೀಟಿಸಿದ್ದಾರೆ. 

ಇದನ್ನೂ ಓದಿ: ‘40 ಪರ್ಸೆಂಟ್ ಕಮಿಷನ್ ಸಿಎಂಗೆ ಸುಸ್ವಾಗತ’: ಬ್ಯಾನರ್ ಹಾಕಿ ಕರ್ನಾಟಕ ಮುಖ್ಯಮಂತ್ರಿ ಗುರಿಯಾಗಿಸಿದ ಟಿಆರ್ ಎಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News