×
Ad

ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿಗೆ ‘ಜುನೈದಿ’ ಸಾಧನಾ ಪ್ರಶಸ್ತಿ

Update: 2022-09-18 23:33 IST

ಕಲಬುರಗಿ, ಸೆ.18:  ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿಯವರಿಗೆ ಪ್ರತಿಷ್ಠಿತ ‘ಜುನೈದಿ’ ಸಾಧನಾ ಪ್ರಶಸ್ತಿ ಸಂದಿದೆ. 

ಇತ್ತೀಚೆಗೆ ನಿಧನರಾದ ಸಯ್ಯುದ್ ಮುಹಮ್ಮದ್ ತಾಜುದ್ದೀನ್ ಬಾಬ ಜುನೈದಿಯವರ ಬ್ರಹತ್ ಅನುಸ್ಮರಣಾ ಸಮ್ಮೇಳನದಲ್ಲಿ ಅಖಿಲ ಭಾರತ ಉಲಮಾ ಮಶಾಯ್ಕ್ ಬೋರ್ಡ್ ಅಧ್ಯಕ್ಷರೂ ಉತ್ತರ ಪ್ರದೇಶದ ಪ್ರಖ್ಯಾತ ಕಿಚೋಚ ಶರೀಫ್ ಮುಖ್ಯಸ್ತರೂ ಆದ ಹಝ್ರತ್ ಅಲ್ಲಾಮ ಮುಹಮ್ಮದ್ ಅಶ್ರಫ್ ಅಲ್ ಅಶ್ರಫೀ ಜೀಲಾನೀ ಪ್ರಶಸ್ತಿ ಪ್ರದಾನ ಮಾಡಿದರು.

ಸಮಾರಂಭದಲ್ಲಿ ಹೈದರಾಬಾದ್ ಜಾಮಿಆ ನಿಝಾಮಿಯ ಪ್ರಾಂಶುಪಾಲರೂ ಪ್ರಖ್ಯಾತ ಭಾಷಣಗಾರ ಅಲ್ಲಾಮ ಅಹ್ಮದ್ ಮುಹಮ್ಮದ್ ನಕಶಬಂದಿ ಸಮೇತ ನೂರಾರು ಉಲಮಾ ಮಶಾಯಿಕ್ ಗಳು ಭಾಗವಹಿಸಿದ್ದರು.

ಸಂಸದ ಡಾ.ಉಮೇಶ್ ಜಾಧವ್, ಪರಿಷತ್ ಸದಸ್ಯ ಸುಶೀಲ್ ನಮೋಶಿ, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಂ, ಗುಲ್ಬರ್ಗಾ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸಯ್ಯದ್ ಹಬೀಬ್ ಸರ್ಮಸ್ತ್ ಉಪಸ್ಥಿತರಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೈಕ್ ರೋಝ ಮುಖ್ಯಸ್ತ ಸಯ್ಯದ್ ಸಿರಾಜುದ್ದೀನ್ ಬಾಬುವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News