ಮುಂಗಾರು, ಹಿಂಗಾರು, 'ನೋ ಸ್ಟ್ರಾಂಗ್', 'ನೋ ಎನಿಮೀಸ್': ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾದ ವಿಧಾನಸಭೆ

Update: 2022-09-19 14:10 GMT
File Photo

ಬೆಂಗಳೂರು: ‘ಮುಂಗಾರು ಯಾವಾಗ ಆರಂಭವಾಗಿ ಯಾವಾಗ ಮುಗಿಯುತ್ತದೆ. ಹಿಂಗಾರು ಯಾವ ತಿಂಗಳಿನಲ್ಲಿ ಆರಂಭವಾಗುತ್ತದೆ ನಿಮಗೆ ಗೊತ್ತೇ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ಕೃಷಿ ಸಚಿವ ಬಿ.ಸಿ.ಪಾಟೀಲ್(BC Patil) ಅವರಿಗೆ ಪ್ರಶ್ನಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಅತಿವೃಷ್ಠಿ ಸಮಸ್ಯೆಗಳ ಮೇಲೆ ನಡೆದ ಚರ್ಚೆಗೆ ಕಂದಾಯ ಸಚಿವ ಆರ್.ಅಶೋಕ್ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ‘ಬಿ.ಸಿ.ಪಾಟೀಲ್ ಮುಂಗಾರು ಬಿತ್ತನೆ ಎಷ್ಟು ಆಗಬೇಕಿತ್ತು ಎಷ್ಟು ಆಗಿದೆ ಹೇಳಿ' ಎಂದರು. ಇದರಿಂದ ಕಕ್ಕಾಬಿಕ್ಕಿಯಾದ ಪಾಟೀಲ್ ಉತ್ತರಿಸಲು ತಡವರಿಸಿದರು. ‘ಮುಂಗಾರು ಯಾವಾಗ ಮುಗಿದಿದೆ? ಮುಂಗಾರು ಮುಗಿದಿದ್ಯಾ ಇಲ್ವಾ?’ ಎಂದು ಸಿದ್ದರಾಮಯ್ಯ ಕೇಳಿದರು.

‘ಸಾರ್ ಮುಂಗಾರು ಇನ್ನೂ ಇಲ್ಲ ಮುಗಿದಿದೆ, ಮುಗಿದಿಲ್ಲ..' ಎಂದು ಪಾಟೀಲ್ ಪ್ರತಿಕ್ರಿಯೆ ನೀಡಿದರು. ‘ಮುಂಗಾರು ಬಿತ್ತನೆ ಆರಂಭ ಯಾವಾಗಿನಿಂದ ಆರಂಭವಾಗುತ್ತದೆ ಹೇಳಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ, ‘ಚಾಮರಾಜನಗರ, ಮೈಸೂರು ಮಾರ್ಚ್‍ನಿಂದ ಆರಂಭವಾಗುತ್ತದೆ' ಎಂದು ಪಾಟೀಲ್ ಉತ್ತರಿಸಿದರು. ‘ಅದು ಪೂರ್ವ ಮುಂಗಾರು. ಇದೀಗ ಮುಂಗಾರು ಮುಗಿದಿದೆ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

'ಸ್ಟ್ರಾಂಗ್ ಆಗಿದ್ದರೆ ಶತ್ರುಗಳು ಜಾಸ್ತಿ': ‘ಸಿದ್ದರಾಮಯ್ಯನವರಿಗೆ ವಿರೋಧಿಗಳು ಜಾಸ್ತಿ' ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದು ವಿಧಾನಸಭೆಯ ಕಲಾಪದಲ್ಲಿ ಕೆಲ ಕಾಲ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ಈ ಹಂತದಲ್ಲಿ ಎದ್ದುನಿಂತ ಸಿದ್ದರಾಮಯ್ಯ, ‘ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್, ಲೆಸ್ ಸ್ಟ್ರಾಂಗ್ ಲೆಸ್ ಎನಿಮೀಸ್, ನೋ ಸ್ಟ್ರಾಂಗ್, ನೋ ಎನಿಮೀಸ್’ ಎಂದು ಚಟಾಕಿ ಹಾರಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್, ‘ಹೌದು ಸಾರ್ ಮೋರ್ ಮನಿ ಮೋರ್ ಪ್ರಾಬ್ಲಂ, ಲೆಸ್ ಮನಿ ಲೆಸ್ ಪ್ರಾಬ್ಲಂ’ ಎಂದು ವ್ಯಾಖ್ಯಾನ ಮಾಡಿದರು.

ಇದನ್ನೂ ಓದಿ: ಡಿಸೆಂಬರ್ ವೇಳೆಗೆ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಕೆ: ಸಚಿವ ಬಿ.ಸಿ. ನಾಗೇಶ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News