'ಡಾನ್ಸಿಂಗ್ ಸ್ಟಾರ್ಸ್ ಸಚಿವರೇ, KPSC ಅಭ್ಯರ್ಥಿಗಳ ಎದುರು ನಿಮ್ಮ ನೃತ್ಯ ಕೌಶಲ್ಯ ತೋರಿಸಿ': ಕಾಂಗ್ರೆಸ್ ಟೀಕೆ

Update: 2022-09-20 08:29 GMT

ಬೆಂಗಳೂರು: 'ಜನಸ್ಪಂದನೆ ಎಂಬ ಜಾತ್ರೆ ಮಾಡಿದ #40PercentSarkara ಈ ಯುವ ಸಮುದಾಯಕ್ಕೆ ಸ್ಪಂದನೆ ಮಾಡುತ್ತಿಲ್ಲ ಏಕೆ? ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,  #40PercentSarkara ಟ್ಯಾಗ್‌ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

 ''ವೇದಿಕೆ ಹುಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, KPSC ಅಭ್ಯರ್ಥಿಗಳ ಎದುರು ನಿಂತು ನಿಮ್ಮ ಧಮ್ಮು ತಾಕತ್ತು ತೋರಿಸಿ. ಬಿಜೆಪಿಯ 'ಡಾನ್ಸಿಂಗ್ ಸ್ಟಾರ್ಸ್' ಸಚಿವರೇ, ಬನ್ನಿ ಪ್ರತಿಭಟನಾ ನಿರತ ಅಭ್ಯರ್ಥಿಗಳ ಎದುರು ನಿಮ್ಮ ನೃತ್ಯ ಕೌಶಲ್ಯ ತೋರಿಸಿ'' ಎಂದು ಕಿಡಿಕಾರಿದೆ. 

'ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಉದ್ಯೋಗಾಕಾಂಕ್ಷಿಗಳು ನೋಟಿಫಿಕೇಶನ್‌ಗಾಗಿ ಕಾಯುತ್ತಿದ್ದಾರೆ. ಮಂಜೂರಾದ ಕೆಲವೇ ಹುದ್ದೆಗಳು ಮಾರಾಟವಾಗುತ್ತಿವೆ. ಪೆನ್, ಪುಸ್ತಕಗಳೇ ಅಭ್ಯರ್ಥಿಗಳ ಆಸ್ತಿ. ಲಂಚವಿಲ್ಲದೆ ಕೆಲಸ ಮಾಡದ #40PercentSarkara ಕ್ಕೆ ಅವುಗಳೇ ಲಂಚವಾಗಿ ನೀಡುತ್ತಿದ್ದಾರೆ. ಈ ಲಂಚ ಪಡೆದಾದರೂ ಕೆಲಸ ಕೊಡಿ ' ಎಂದು ಕಾಂಗ್ರೆಸ್ ಟ್ವೀಕಿಸಿದೆ. 

ಇತ್ತೀಚಿಗೆ ರಾಜ್ಯ ಸರಕಾರ ಹೊರಡಿಸಿರುವ ಪಿಎಸ್ಸೈ ನೇಮಕಾತಿ ಮರು ಪರೀಕ್ಷೆ ಆದೇಶ ಹಿಂಪಡೆಯಬೇಕು ಹಾಗೂ ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನೀಡಬೇಕೆಂದು ಒತ್ತಾಯಿಸಿ ರವಿವಾರದಿಂದ KPSC ಅಭ್ಯರ್ಥಿಗಳು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News