ಜೇವರ್ಗಿಯಲ್ಲಿ ಗಣೇಶ ವಿಸರ್ಜನೆ ಹಿನ್ನೆಲೆ; ಪ್ರಮೋದ್ ಮುತಾಲಿಕ್‌ ಸೇರಿ ನಾಲ್ವರ ಸಾರ್ವಜನಿಕ ಭಾಷಣಕ್ಕೆ ನಿರ್ಬಂಧ

Update: 2022-09-20 18:28 GMT

ಕಲಬುರಗಿ, ಸೆ.20: ಶ್ರೀರಾಮ ಸೇನೆಯಿಂದ ಜಿಲ್ಲೆಯ ಜೇವರ್ಗಿ ಪಟ್ಟಣದ ಅಖಂಡೇಶ್ವರ ಎ.ಪಿ.ಎಂ.ಸಿ ಯಾರ್ಡ್ ಮತ್ತು ಗಣೇಶ ಚೌಕ್ ನಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ ವಿಸರ್ಜನೆ ಇದೇ ಸೆ.21 ರಂದು ನಡೆಯಲಿರುವ ಕಾರಣ ಕಾನೂನು ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಕಾಪಾಡುವ ದೃಷ್ಠಿಯಿಂದ ಸೆ.20ರ ಬೆಳಿಗ್ಗೆ 6 ಗಂಟೆಯಿಂದ ಸೆ.21ರ ಮಧ್ಯರಾತ್ರಿ 12 ಗಂಟೆ ವರೆಗೆ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ನಾಲ್ವರ ಸಾರ್ವಜನಿಕ ಭಾಷಣ ನಿರ್ಬಂಧಿಸಿ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸೋಮವಾರ ಆದೇಶಿಸಿದ್ದಾರೆ.

ಪ್ರಮೋದ್ ಮುತಾಲಿಕ್‌, ಚೈತ್ರಾ ಕುಂದಾಪುರ ಸೇರಿದಂತೆ ಕು.ಹಾರಿಕಾ ಮಂಜುನಾಥ್ ಹಾಗೂ  ಕಾಳಿ ಶ್ರೀಸ್ವಾಮಿ ಅವರು  ಸಾರ್ವಜನಿಕ‌ವಾಗಿ ಯಾವುದೇ ಭಾಷಣ ಮಾಡದಂತೆ ಸಿ.ಆರ್.ಪಿ.ಸಿ. ಕಾಯ್ದೆ-1973ರ ಸೆಕ್ಷನ್ 133, 143 ಹಾಗೂ 144ರನ್ವಯ ನಿರ್ಬಂಧಿಸಿ ಆದೇಶಿಸಲಾಗಿದೆ.

ಇದನ್ನೂ ಓದಿ: ಕೋಲಾರ | ದೇವರ ಮೂರ್ತಿ ಮುಟ್ಟಿದ ದಲಿತ ಬಾಲಕ: 60 ಸಾವಿರ ರೂ. ದಂಡ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News