ಕೋವಿಡ್ ಮೃತರ ಕುಟುಂಬಕ್ಕೆ ರಾಜ್ಯದಿಂದ 1 ಲಕ್ಷ, ಕೇಂದ್ರದಿಂದ 50 ಸಾವಿರ ರೂ. ಪರಿಹಾರ: ಸಚಿವ ಆರ್.ಅಶೋಕ್

Update: 2022-09-21 16:36 GMT

ಬೆಂಗಳೂರು, ಸೆ.21: ಬೆಂಗಳೂರು ನಗರ ಜಿಲ್ಲೆಯಲ್ಲಿ ಆಗಸ್ಟ್ 2022ರವರೆಗೆ ಕೋವಿಡ್-19ರ ಒಂದು, ಎರಡು, ಮೂರನೆ ಅಲೆಯಿಂದ ಒಟ್ಟು 16,982 ಜನರು ಮೃತಪಟ್ಟಿದ್ದು, ಬಿಪಿಎಲ್ ಕುಟುಂಬದ ಕೋವಿಡ್ ಮೃತ ವ್ಯಕ್ತಿಯ ಕಾನೂನುಬದ್ಧ ವಾರಸುದಾರನಿಗೆ ರಾಜ್ಯ ಸರಕಾರವು ಹೆಚ್ಚವರಿ 1 ಲಕ್ಷ ರೂ. ಘೋಷಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಕೇಂದ್ರ ಸರಕಾರದಿಂದ 50 ಸಾವಿರ ರೂ.ನೀಡಲಾಗಿದೆ ಎಂದರು. 

ಬುಧವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪರವಾಗಿ ನಾಗರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ನಗರ ಜಿಲ್ಲೆಯಲ್ಲಿ ಕೋವಿಡ್ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಒಟ್ಟು 17,467 ಪ್ರಕರಣಗಳ ಪೈಕಿ 6,105 ಬಿಪಿಎಲ್, 2,002 ಎಪಿಎಲ್ ರೇಷನ್ ಕಾರ್ಡ್ ಹೊಂದಿರುವುದು ಕಂಡು ಬಂದಿರುತ್ತದೆ ಹಾಗೂ 9,360 ಪ್ರಕರಣಗಳಲ್ಲಿ ಯಾವುದೇ ರೇಷನ್ ಕಾರ್ಡ್ ಮಾಹಿತಿ ನಮೂದಿಸಿರುವುದಿಲ್ಲ ಎಂದು ತಿಳಿಸಿದರು. 

ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ಕೋವಿಡ್‍ನಿಂದ ಮೃತಪಟ್ಟ ಎಲ್ಲ ಪ್ರಕರಣಗಳಲ್ಲಿ 50 ಸಾವಿರ ರೂ.ಪರಿಹಾರಧನವನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ನೇರ ಹಣ ಸಂದಾಯದ ಮೂಲಕ ಫಲಾನುಭವಿಗಳಿಗೆ ಪಾವತಿಸಲಾಗಿದೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News