ಕಲಬುರಗಿ | PFI ಮುಖಂಡರ ಮನೆಗಳ ಮೇಲೆ NIA ದಾಳಿ: ಇಬ್ಬರು ಮುಖಂಡರು ವಶಕ್ಕೆ

Update: 2022-09-22 07:03 GMT

ಕಲಬುರಗಿ, ಸೆ.22: ಜಿಲ್ಲೆಯಲ್ಲಿ ಹಲವು ಪಿಎಫ್ಐ(PFI) ಮುಖಂಡ ಮನೆಗಳ ಮೇಲೆ ಗುರುವಾರ ಬೆಳಗ್ಗೆ ಎನ್ಐಎ(NIA) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇದೇವೇಳೆ ಇಬ್ಬರು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

ಪಿಎಫ್‌ಐ ಜಿಲ್ಲಾ ಅಧ್ಯಕ್ಷ ಶೇಖ್ ಇಜಾಝ್ ಅಲಿ ಮತ್ತು ಪಿಎಫ್‌ಐ ರಾಜ್ಯ ಸಮಿತಿಯ ಸದಸ್ಯ ಶಾಹೀದ್ ನಸೀಬ್ ಅವರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ನಗರದ ಟಿಪ್ಪು ಸುಲ್ತಾನ್ ಚೌಕ್ ಬಳಿಯಿರುವ ಪಿಎಫ್ಐ ಜಿಲ್ಲಾ ಅಧ್ಯಕ್ಷ ಶೇಖ್ ಇಜಾಝ್ ಅಲಿಯವರ ಮನೆ ಸೇರಿದಂತೆ ಹಲವರ ಮನೆಗಳ ಎನ್ಐಎ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಬಿಡುಗಡೆಗೆ ಆಗ್ರಹಿಸಿ ಧರಣಿ

ಶೇಖ್ ಇಜಾಝ್ ಅಲಿ ಮತ್ತು ಪಿಎಫ್‌ಐ ರಾಜ್ಯ ಸಮಿತಿಯ ಸದಸ್ಯ ಶಾಹೀದ್ ನಸೀಬ್ ಅವರನ್ನು ಎನ್ಐಎ ವಶಕ್ಕೆ ಪಡೆದಿರುವುದನ್ನು ಖಂಡಿಸಿ ಪಿಎಫ್ಐ ಕಾರ್ಯಕರ್ತರು ನಗರದ ಟಿಪ್ಪು ಚೌಕ್ ಬಳಿ ಧರಣಿ ನಡೆಸಿದರು.

PFI ಕಂಡರೆ ಬಿಜೆಪಿ ಸರಕಾರಕ್ಕೆ ಎಲ್ಲಿಲ್ಲದ ಭಯ. ಅದಕ್ಕಾಗಿ ಪಿಎಫ್‌ಐ ಹತ್ತಿಕ್ಕಲು ಬಿಜೆಪಿ ಸರಕಾರ ಸತತ ಪ್ರಯತ್ನ ಮಾಡುತ್ತಿದೆ. ವಶಕ್ಕೆ ಪಡೆದ ಸಂಘಟನೆಯ ಇಬ್ಬರು ಮುಖಂಡರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News