ನೆಪ ಹೇಳುವ ಬದಲು BJPಯವರು ಇನ್ನಾದರೂ PFI ಸಂಘಟನೆಯನ್ನು ನಿಷೇಧಿಸಲಿ: ದಿನೇಶ್ ಗುಂಡೂರಾವ್

Update: 2022-09-23 09:30 GMT

ಬೆಂಗಳೂರು: ''ರಾಜ್ಯ ಸೇರಿದಂತೆ ದೇಶದ ಹಲವೆಡೆ NIA ಅಧಿಕಾರಿಗಳು ಪಿಎಫ್ ಐ ಕಚೇರಿಯ ಮೇಲೆ ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ. ಭಯೋತ್ಪಾದನೆ, ದೇಶ ವಿರೋಧಿ ಚಟುವಟಿಕೆ, ವಿದೇಶಿ ಹಣವನ್ನು ಉಗ್ರಕೃತ್ಯಕ್ಕೆ ಬಳಸಿರುವ ಆರೋಪ PFI ಮೇಲಿದೆ. ಹಾಗಾಗಿ PFI ಯನ್ನು ನಿಷೇಧಿಸಲು ಇದು ಸಕಾಲ'' ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಈ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಅವರು, 'BJPಯವರು ಇನ್ನಾದರೂ ನೆಪ ಹೇಳುವ ಬದಲು ಪಿಎಫ್ ಐ ಸಂಘಟನೆಯನ್ನು ನಿಷೇಧಿಸಲಿ' ಎಂದು ಒತ್ತಾಯಿಸಿದ್ದಾರೆ. 

''ಯಾವುದೇ ಸಂಘಟನೆ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದರೆ ಆ ಸಂಘಟನೆಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಕರ್ತವ್ಯ. ಕೆಲವು ಗಲಭೆಗಳಾದಾಗ BJPಯವರು PFI ಸಂಘಟನೆಯ ವಿರುದ್ಧ ಬೊಟ್ಟು ತೋರಿಸಿ ದೇಶದ್ರೋಹದ ಆರೋಪ ಮಾಡುತ್ತಾರೆ, ನಂತರ ಸುಮ್ಮನಾಗುತ್ತಾರೆ. ವೃಥಾ ಆರೋಪ ಮಾಡುವ ಬದಲು ಈಗಲಾದರೂ PFI ಸಂಘಟನೆ ನಿಷೇಧಿಸಲಿ'' ಎಂದು  ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ: ಭ್ರಷ್ಟಾಚಾರ ಪ್ರಕರಣ: ಯಡಿಯೂರಪ್ಪ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ತಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News