'40% ಸರ್ಕಾರ ಅಭಿಯಾನ'ದ ಪೋಸ್ಟರ್‌ನಲ್ಲಿ ನನ್ನ ಚಿತ್ರವನ್ನು ಅನುಮತಿಯಿಲ್ಲದೆ ಬಳಸಲಾಗಿದೆ: ನಟನ ಆರೋಪ

Update: 2022-09-23 14:58 GMT
Photo: Twitter/@akhiliy 

ಬೆಂಗಳೂರು: ಕಾಂಗ್ರೆಸ್‌ನ(Congress) “40% ಸರ್ಕಾರ” ಅಭಿಯಾನಕ್ಕೆ ತನ್ನ ಫೋಟೋವನ್ನು ಒಪ್ಪಿಗೆ ಇಲ್ಲದೆ ಬಳಸಲಾಗಿದೆ ಎಂದು ಬೆಂಗಳೂರು ಮೂಲದ ನಟ ಅಖಿಲ್ ಅಯ್ಯರ್ (Akhil Iyer) ಆರೋಪಿಸಿದ್ದಾರೆ. 

“ನನ್ನ ಮುಖವನ್ನು ಕಾನೂನುಬಾಹಿರವಾಗಿ ಮತ್ತು ನನ್ನ ಒಪ್ಪಿಗೆಯಿಲ್ಲದೆ ನನಗೆ ಯಾವುದೇ ಸಂಬಂಧವಿಲ್ಲದ ಕಾಂಗ್ರೆಸ್‌ ನ "40% ಸರ್ಕಾರ" ಅಭಿಯಾನಕ್ಕಾಗಿ ಬಳಸುತ್ತಿರುವುದನ್ನು ಕಂಡು ನಾನು ದಿಗ್ಭ್ರಮೆಗೊಂಡಿದ್ದೇನೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ.” ಎಂದು ಅಯ್ಯರ್‌ ಟ್ವೀಟ್‌ ಮಾಡಿದ್ದಾರೆ. 

ಅಲ್ಲದೆ ಈ ಬಗ್ಗೆ ಗಮನ ಹರಿಸುವಂತೆ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಮನವಿಯನ್ನು ಮಾಡಿದ್ದಾರೆ.

"40% ಸರ್ಕಾರದ ಹೊಟ್ಟೆಬಾಕತನವು 54,000 ಕ್ಕೂ ಹೆಚ್ಚು ಯುವಕರನ್ನು ವೃತ್ತಿಜೀವನವನ್ನು ಕಸಿದುಕೊಂಡಿದೆ" ಎಂದು ಬರೆಯಲಾಗಿರುವ ಪೋಸ್ಟರ್‌ ಒಂದರಲ್ಲಿ ಅಯ್ಯರ್‌ ಅವರ ಫೋಟೊ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಪೋಸ್ಟರ್‌ನ ಎಲ್ಲೂ ಅದು ಕಾಂಗ್ರೆಸ್‌ ನ ಅಭಿಯಾನ ಎಂದು ಸೂಚಿಸುವ ಯಾವುದೇ ಚಿಹ್ನೆಗಳು ಕಂಡು ಬಂದಿಲ್ಲ. ಹಾಗಾಗಿ ಅಯ್ಯರ್‌ ನ ಫೊಟೋವನ್ನು ಕಾಂಗ್ರೆಸ್‌ ಬಳಸಿಕೊಂಡಿದೆಯೇ ಇಲ್ಲವೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅಯ್ಯರ್‌ ಹಂಚಿಕೊಂಡ ಚಿತ್ರಗಳಲ್ಲಿರುವ '40% ಸರ್ಕಾರ' ಹೆಸರಿನ ಪ್ರೊಫೈಲನ್ನು ಹುಡುಕಿದಾಗ ಅದರಲ್ಲೂ, ಆ ಪ್ರೊಫೈಲ್‌ ಅನ್ನು ಕಾಂಗ್ರೆಸ್‌ ಅಧಿಕೃತವಾಗಿ ಬಳಸಿಕೊಳ್ಳುವ ಯಾವುದೇ ಸುಳಿವು ಸಿಕ್ಕಿಲ್ಲ. ಬದಲಾಗಿ, ಆ ಪ್ರೊಫೈಲಿನ 'ಬಯೋ'ದಲ್ಲಿ '40% ಸರ್ಕಾರದ ವಿರುದ್ಧ ಕನ್ನಡಿಗರ ಅಭಿಯಾನ' ಎಂದು ಬರೆಯಲಾಗಿದೆ.

ಇದನ್ನೂ ಓದಿ: ಗೌತಮ್ ಅದಾನಿಯ ಹಿರಿಯ ಸಹೋದರ ವಿನೋದ್ ಶಾಂತಿಲಾಲ್ ಅತ್ಯಂತ ಶ್ರೀಮಂತ ಅನಿವಾಸಿ ಭಾರತೀಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News