ಚಿಕ್ಕಮಗಳೂರು | ಭಾರೀ ಮಳೆಯಿಂದ ಈರುಳ್ಳಿ ಬೆಳೆಗೆ ಹಾನಿ: ಟ್ರ್ಯಾಕ್ಟರ್ ಹರಿಸಿ ಬೆಳೆ ನಾಶಪಡಿಸಿದ ರೈತ

Update: 2022-09-23 16:22 GMT

ಚಿಕ್ಕಮಗಳೂರು, ಸೆ.23: ಇತ್ತೀಚೆಗೆ ಜಿಲ್ಲಾದ್ಯಂತ ಸುರಿದ ಭಾರೀ ಮಳೆ ರೈತರನ್ನು ಕಂಗಲಾಗಿಸಿದ್ದು,  ಬೇಸತ್ತ ರೈತರು ಈರುಳ್ಳಿ ಬೆಳೆಯನ್ನೇ ನಾಶ ಮಾಡಲು ಮುಂದಾಗಿದ್ದಾರೆ.

ಜಿಲ್ಲೆಯ ಅಜ್ಜಂಪುರ ತಾಲೂಕಿ ರೈತ ಮಂಜುನಾಥ್ 5 ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಈರುಳ್ಳಿ ಬೆಳೆ ಮೇಲೆ ಟ್ರಾಕ್ಟರ್ ಹರಿಸಿ ನಾಶ ಪಡಿಸಿದ್ದಾರೆ. ಭಾರೀ ಪ್ರಮಾಣದ ಈರುಳ್ಳಿ ಸಂಪೂರ್ಣ ನಾಶವಾಗಿದ್ದು, ಈರುಳ್ಳಿ ಸೈಜ್ ಬಾರದೇ, ಬೆಳ್ಳುಳ್ಳಿಯಂತಾಗಿರುವುದಲ್ಲೇ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇಲ್ಲದ ಪರಿಣಾಮ ಮನನೊಂದು ಟ್ರಾಕ್ಟರ್ ಹರಿಸಿ ಬೆಳೆ ನಾಶಪಡಿಸಿದ್ದಾರೆಂದು ತಿಳಿದು ಬಂದಿದೆ.

ಮೂರು-ನಾಲ್ಕು ಲಕ್ಷ ರೂ ಖರ್ಚು ಮಾಡಿ 5 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದು, ಮಳೆಯಿಂದ ಈರುಳ್ಳಿ ಬೆಳೆ ಉತ್ತಮ ಇಳುವರಿ ಬಂದಿಲ್ಲ, ಈರುಳ್ಳಿ ಕಟಾವು ಮಾಡಿದರೇ ಕೂಲಿ ಹಣವೂ ಸಿಗುವುದಿಲ್ಲ. ಹಣ ಬೇಡ ಬೆಳೆ ಕಿತ್ತುಕೊಂಡು ಹೋಗಿ ಎಂದರೂ ಯಾರೂ ಮುಂದಾಗುತ್ತಿಲ್ಲ. ಆದ್ದರಿಂದ ಟ್ರಾಕ್ಟರ್ ಹೊಡೆದು ನಾಶಪಡಿಸಿದ್ದೇನೆಂದು ರೈತ ಮಂಜುನಾಥ್ ತಮ್ಮ ಅಳಲು ತೋಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News