ಅನುಮತಿ ಸಿಗದೆ ಇದ್ದರೂ ಮಹಿಷ ದಸರಾ ಆಚರಣೆ ಮಾಡಿಯೇ ತೀರುತ್ತೇವೆ: ಲೇಖಕ ಸಿದ್ಧಸ್ವಾಮಿ

Update: 2022-09-24 16:54 GMT

ಮೈಸೂರು,ಸೆ.24: 'ಉದ್ದೇಶ ಪೂರ್ವಕದಿಂದಲೇ ಚಾಮುಂಡಿ ಬೆಟ್ಟದ ಮಹಿಷ ಮೂರ್ತಿ ಬಳಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡದೆ ಮೂಲ ನಿವಾಸಿಗಳ ಆಚರಣೆಗೆಧಕ್ಕೆಯುಂಟು ಮಾಡಲಾಗುತ್ತಿದೆ. ಆದರೂ ನಾವು ಇದಕ್ಕೆಲ್ಲಾ ಬಗ್ಗದೆ ಮೈಸೂರು ನಗರದ ಅಶೋಕಪುಂ ನ ಅಂಬೇಡ್ಕರ್ ಪಾರ್ಕ್ ನಲ್ಲಿ ಮಹಿಷ ದಸರಾ ಆಚರಣೆ ಮಾಡಿಯೇ ಮಾಡುತ್ತೇವೆ' ಎಂದು ಮಹಿಷ ದಸರಾಆಚರಣಾ ಸಮಿತಿ ಅಧ್ಯಕ್ಷ ಲೇಖಕ ಸಿದ್ಧಸ್ವಾಮಿ ತಿಳಿಸಿದರು.

ಈ ಸಂಬಂಧ“ವಾರ್ತಾಭಾರತಿ”ಯೊಂದಿಗೆ ಶನಿವಾರದೂರವಾಣಿಯಲ್ಲಿ ಮಾತನಾಡಿದಅವರು, ಕಳೆದ ಎಂಟು ವರ್ಷಗಳಿಂದ ಚಾಮುಂಡಿ ಬೆಟ್ಟದ ಮಹಿಷ ಮೂರ್ತಿ ಬಳಿಯೇ ನಾಡಿನ ಸಾಹಿತಿಗಳು, ಬುದ್ಧಿಜೀವಿಗಳು ಸೇರಿದಂತೆ ಮೂಲನಿವಾಸಿಗಳು ಅದ್ದೂರಿದಸರಾಆಚರಣೆ ಮಾಡುತ್ತಿದ್ದೆವು.ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಉದ್ದೇಶ ಪೂರ್ವಕವಾಗಿಯೇ ಮೂಲ ನಿವಾಸಿಗಳ ಆಚರಣೆಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ಕಿಡಿಕಾರಿದರು.

'ಜಿಲ್ಲಾಡಳಿತದ ನಿರ್ಧಾರವನ್ನು ಧಿಕ್ಕರಿಸಿ ಕಳೆದ ನಾಲ್ಕು ವರ್ಷಗಳಿಂದ ನಗರದ ಅಶೋಕಪುಂ ನಲ್ಲಿ ಮಹಿಷ ದಸರಾಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಈ ಬಾರಿಯೂ ಅಶೋಕಪುಂ ನ ಅಂಬೇಡ್ಕರ್ ಪಾರ್ಕ್‍ನ ಅಂಬೇಡ್ಕರ್ ಪ್ರತಿಮೆ ಬಳಿ ಸೆಪ್ಟಂಬರ್ 25ರ ರವಿವಾರ ಬೆಳಿಗ್ಗೆ 10 ಗಂಟೆ ಮಹಿಷನ ಕಂಚಿನ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷ ದಸರಾ ಆಚರಿಸಲಾಗುವುದು' ಎಂದು ತಿಳಿಸಿದರು. 

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ವಹಿಸಲಿದ್ದು, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್‍ಚಂದ್ರಗುರು, ಇತಿಹಾಸ ತಜ್ಞಪ್ರೊ.ಪಿ.ವಿ.ನಂಜರಾಜೇಅರಸ್, ಮಾಜಿ ಮೇಯರ್ ಪುರುಷೋತ್ತಮ್‍ ಸೇರಿದಂತೆ ಮೂಲ ನಿವಾಸಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News