ಕೆಪಿಸಿಸಿ​​ ಮುಖ್ಯ ವಕ್ತಾರರ ನೇಮಕ

Update: 2022-09-25 17:01 GMT

ಬೆಂಗಳೂರು, ಸೆ.25: ಕೆಪಿಸಿಸಿ ಸಂವಹನ ವಿಭಾಗಗಕ್ಕೆ ಮುಖ್ಯ ವಕ್ತಾರರನ್ನು ನೇಮಕ ಮಾಡಿ ಕೆಪಿಸಿಸಿ ಸಂವಹನ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು ರವಿವಾರ ಆದೇಶ ಹೊರಡಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕರಾದ ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ, ವಿ.ಆರ್.ಸುದರ್ಶನ್, ಪ್ರೊ.ಬಿ.ಕೆ.ಚಂದ್ರಶೇಖರ್, ಜಿ.ಸಿ.ಚಂದ್ರಶೇಖರ್, ಡಾ.ಎಲ್.ಹನುಮಂತಯ್ಯ, ಪ್ರಕಾಶ್ ರಾಥೋಡ್, ಮುಟ್ಟಮ್ಮಾ, ಎಚ್.ಎಂ.ರೇವಣ್ಣ, ಬಿ.ಎನ್.ಚಂದ್ರಪ್ಪ, ಐವಾನ್ ಡಿಸೋಜಾ.

ಡಾ.ಬಿ.ಪಾಟೀಲ್, ಆರ್.ವಿ.ವೆಂಕಟೇಶ್, ಎಂ.ನಾರಾಯಣಸ್ವಾಮಿ, ಜಲಜಾ ನಾಯ್ಕ್, ಪಿ.ಆರ್.ರಮೇಶ್, ಪ್ರೊ.ಕೆ.ಈ.ರಾಧಕೃಷ್ಣ, ಸಿ.ನಾರಾಯಣಸ್ವಾಮಿ, ನಂಜಯ್ಯ.ಎಂ., ಪ್ರೊ.ದ್ವಾರಕನಾಥ್, ಶಂಕರ್ ಗುಹಾ, ಧರ್ಮೇಶ್, ವೆಂಕಟೇಶ್, ನಿವೇದಿತಾ ಆಳ್ವಾ, ನಿಕೇತ್ ರಾಜ್, ಎಸ್.ಎ.ಹುಸೇನ್, ನಟರಾಜ್ ಗೌಡ ಅವರನ್ನು ಕೆಪಿಸಿಸಿ ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

► ಕೆಪಿಸಿಸಿ ವಕ್ತಾರರ ನೇಮಕ

ಕೆಪಿಸಿಸಿ ಸಂವಹನ ವಿಭಾಗಗಕ್ಕೆ ಎಂಟು ಮಂದಿ ಉಪ ವಕ್ತಾರರು ಸೇರಿದಂತೆ ಒಟ್ಟು 41 ವಕ್ತಾರರನ್ನು ನೇಮಕ ಮಾಡಲಾಗಿದೆ. 

ಕಾಂಗ್ರೆಸ್ ನಾಯಕರಾದ ಆಗಾ ಸುಲ್ತಾನ್, ಅಕ್ಕೈಪದ್ಮಶಾಲಿ, ಎಸ್.ಎ.ಅಹ್ಮದ್, ಮಂಜುನಾಥ್ ಅದ್ದೆ, ಸೂರ್ಯ ಮುಕುಂದ್‍ರಾಜ್ ಸೇರಿದಂತೆ ಒಟ್ಟು 41 ವಕ್ತಾರರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

--------------------------------------

ಕೆಪಿಸಿಸಿ ಸಂವಹನ ಸಮಿತಿಗೆ ನೇಮಕ

ಕೆಪಿಸಿಸಿ ಸಂವಹನ ವಿಭಾಗಗಕ್ಕೆ ರಾಜ್ಯ ಸಮಿತಿಗೆ ಹಲವರನ್ನು ನೇಮಕ ಮಾಡಿ ಕೆಪಿಸಿಸಿ ಸಂವಹನ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು ರವಿವಾರ ಆದೇಶ ಹೊರಡಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕರಾದ ಅನಿಲ್ ತಡಕಲ್, ರಾಮಚಂದ್ರಪ್ಪ, ಲಕ್ಷ್ಮಣ್, ಬಾಲಕೃಷ್ಣಯಾದವ್, ಅಬ್ದುಲ್ ಮುನೀರ್, ಸೆಯ್ಯದ್ ಆರ್ಶದ್, ರಾಜು, ಡಾ.ಕಿರಣ್ ದೇಶ್‍ಮುಖ್ ಸೇರಿದಂತೆ ಇಪ್ಪತ್ತು ಕಾಂಗ್ರೆಸ್ ನಾಯಕರು ಈ ಸಮಿತಿಯಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News