'PayCM' ಅಭಿಯಾನ ಲಿಂಗಾಯತ ವಿರೋಧಿ ಎಂದು ಹೇಳುತ್ತಿರುವ BJPಯ ಲಾಜಿಕ್ ಏನು?: ದಿನೇಶ್ ಗುಂಡೂರಾವ್ ಪ್ರಶ್ನೆ

Update: 2022-09-26 05:29 GMT

ಬೆಂಗಳೂರು: 'BJPಯವರು CM ವಿರುದ್ಧದ ಈ ಅಭಿಯಾನವನ್ನು ಲಿಂಗಾಯತ ವಿರೋಧಿ ಎಂದು ಬ್ರ್ಯಾಂಡ್ ಮಾಡುತ್ತಿರುವುದು ಹತಾಶ ಮನಃಸ್ಥಿತಿಯ ಪ್ರತೀಕ.'PayCM' ಅಭಿಯಾನ ಅದ್ಹೇಗೆ ಲಿಂಗಾಯತ ವಿರೋಧಿ ಆಗುತ್ತದೆ? BJPಯ ಲಾಜಿಕ್ ಏನು?' ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'PayCM' ಅಭಿಯಾನ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಳಚುವ ಪೋಸ್ಟರ್ ಹೊರತು ಇದಕ್ಕೆ ಇನ್ನೇನೋ ಅರ್ಥ ಕಲ್ಪಿಸುವ ಅಗತ್ಯವಿಲ್ಲ' ಎಂದು ತಿಳಸಿದ್ದಾರೆ. 

'ಬೊಮ್ಮಾಯಿ ವಿರುದ್ಧದ 'PayCM' ಅಭಿಯಾನವನ್ನು ಲಿಂಗಾಯತ ವಿರೋಧಿ ಎಂಬಂತೆ ಬಿಂಬಿಸಿ BJP, ಸತ್ಯವನ್ನು ಡೈವರ್ಟ್ ಮಾಡುತ್ತಿದೆ. ಆದರೆ BJPಯವರಷ್ಟು ಲಿಂಗಾಯತ ವಿರೋಧಿಗಳು ಯಾರಿದ್ದಾರೆ.? ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪರನ್ನು CM ಪದವಿಯಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದ್ದು ಲಿಂಗಾಯತ ಸಮುದಾಯಕ್ಕೆ ಮಾಡಿದ ದ್ರೋಹವಲ್ಲವೆ.?' ಎಂದು ಪ್ರಶ್ನೆ ಮಾಡಿದ್ದಾರೆ. 

'ಬೊಮ್ಮಾಯಿ ಸರ್ಕಾರದ ಮೇಲಿರೋ ಭ್ರಷ್ಟಾಚಾರದ ಕಳಂಕದಿಂದ ಲಿಂಗಾಯತ‌ ಮತಗಳು ಕೈ ತಪ್ಪಿ ಹೋಗುವ ಆತಂಕ BJPಯವರನ್ನು ಕಾಡುತ್ತಿದೆ. ಹಾಗಾಗಿ ಬೊಮ್ಮಾಯಿಯವರ ಲಿಂಗಾಯತ ಕಾರ್ಡ್ ಬಳಸಿ ಅನುಕಂಪ ಗಿಟ್ಟಿಸುವ ಕೀಳು ತಂತ್ರಕ್ಕೆ   BJP ಮುಂದಾಗಿದೆ. ಭ್ರಷ್ಟಚಾರಿಗಳಿಗೆ ಯಾವುದೇ ಜಾತಿ-ಸಮುದಾಯ ಇರುವುದಿಲ್ಲ. ಭ್ರಷ್ಟರದ್ದೇ ಒಂದು ಜಾತಿ. ಅದರ ಹೆಸರೇ BJP' ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News