ಜಗದೀಶ್ ಶೆಟ್ಟರ್ ಗೆ ಸಿಎಂ ಹುದ್ದೆಯೂ ಇಲ್ಲ, ರಾಷ್ಟ್ರಪತಿ ಕಾರ್ಯಕ್ರಮದ ವೇದಿಕೆಯಲ್ಲೂ ಸ್ಥಾನವಿಲ್ಲ: ಕಾಂಗ್ರೆಸ್ ಆರೋಪ

Update: 2022-09-26 09:06 GMT

ಬೆಂಗಳೂರು: ' ಇಂದು ಹುಬ್ಬಳ್ಳಿಯ್ಲಲಿ ನಡೆಯಲಿರುವ ರಾಷ್ಟ್ರಪತಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ  ಸ್ಥಾನವಿಲ್ಲ. ಅವರ ಹೆಸರನ್ನು ಕೈಬಿಡಲಾಗಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಗ್ರೆಸ್, ''ಮಾಜಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ನಂತರ ಮತ್ತೊಬ್ಬ ಲಿಂಗಾಯತ ನಾಯಕನನ್ನು ಬಿಜೆಪಿ ಮುಗಿಸಿಹಾಕುತ್ತಿದೆ. ಉದ್ದೇಶಪೂರ್ವಕವಾಗಿ ಜಗದೀಶ್ ಶೆಟ್ಟರ್ ಹೆಸರು ಕೈಬಿಡುವ ಮೂಲಕ ಬಿಜೆಪಿ ಲಿಂಗಾಯತ ವಿರೋಧಿ ಧೋರಣೆ ಅನಾವರಣಗೊಳಿಸಿದೆ ಅಲ್ಲವೇ?'' ಎಂದು ಹೇಳುವ ಮೂಲಕ  ‘ಕಾಂಗ್ರೆಸ್ ಲಿಂಗಾಯತ ಸಮುದಾಯವನ್ನು ಟಾರ್ಗೆಟ್ ಮಾಡಿದೆ' ಎಂಬ ಹೇಳಿಕೆ ನೀಡಿದ್ದ ಸಚಿವ ಸುಧಾಕರ್ ಅವರಿಗೆ ತಿರುಗೇಟು ನೀಡಿದೆ. 

'ಶೆಟ್ಟರ್ ಅವರ ಕ್ಷೇತ್ರದಲ್ಲೇ ರಾಷ್ಟ್ರಪತಿ ಕಾರ್ಯಕ್ರಮ. ಅವರೇ ಅಲ್ಲಿನ ಶಾಸಕರು. ಬಿಎಸ್ ವೈ ನಂತರದ ಬಿಜೆಪಿಯ ದೊಡ್ಡ ಲಿಂಗಾಯತ ನಾಯಕ, ಮಾಜಿ ಮುಖ್ಯಮಂತ್ರಿಗಳು ಕೂಡ ಆಗಿರುವ ಜಗದೀಶ್ ಶೆಟ್ಟರ್ ಹೆಸರು ಕೈಬಿಡಲಾಗಿದೆ. ಬಿಜೆಪಿಯಲ್ಲಿ ಲಿಂಗಾಯತ ವಿರೋಧಿ ಧೋರಣೆ ಅದೆಷ್ಟು ಆಳ, ಅಗಲಕ್ಕೆ ಬೇರು ಬಿಟ್ಟಿದೆ ಎಂದು ಊಹಿಸಬಹುದು'' ಎಂದು ಕಾಂಗ್ರೆಸ್ ಟ್ವೀಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News