'ಪೇಸಿಎಂ' ನಿಂದ ಬೇಸತ್ತು ಭ್ರಷ್ಟಾಚಾರದ ವಿರುದ್ಧ ಅಭಿಯಾನಕ್ಕೆ ಮುಂದಾದ ರಾಜ್ಯ ಸರಕಾರ

Update: 2022-09-26 13:23 GMT

ಬೆಂಗಳೂರು, ಸೆ. 26: ರಾಜ್ಯ ಸರಕಾರವು ಭ್ರಷ್ಟಾಚಾರ ನಿರ್ಮೂಲನಾ ಅಭಿಯಾನವನ್ನು ಅ.2ರಿಂದ ಅ.20ರವರೆಗೆ ಆಯೋಜಿಸಿದ್ದು, ರಾಜ್ಯದ ಎಲ್ಲ ಸರಕಾರಿ ಕಚೇರಿಗಳಲ್ಲಿ ‘ನನಗೆ ಯಾರು ಲಂಚ ಕೊಡಬೇಕಾಗಿಲ್ಲ. ನಾನು ಭ್ರಷ್ಟ ಅಧಿಕಾರಿ ಆಗಲಾರೆ’ ಎಂಬ ಶೀರ್ಷಿಕೆಯ ನಾಮಪಲಕವನ್ನು ಅಳವಡಿಸುವಂತೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಕೋರಿದ್ದಾರೆ.

ಸರಕಾರ ವಿರುದ್ಧ ಇತ್ತೀಚೆಗೆ ಕಾಂಗ್ರೆಸ್ ಕೈಗೊಂಡಿರುವ‘ಪೇ ಸಿಎಂ ಅಭಿಯಾನ'ದಿಂದ ತೀವ್ರ ಮುಜುಗರಕ್ಕೀಡಾಗಿತ್ತು. ಹಾಗಾಗಿ ಸಿಟಿಜೆನ್ ಎನ್‍ಕ್ವರಿ ಕೌನ್ಸಿಲ್ ಹಾಗೂ ಸಿಇಸಿ ಟ್ರಸ್ಟ್ ವತಿಯಿಂದ ‘ನನಗೆ ಯಾರು ಲಂಚ ಕೊಡಬೇಕಾಗಿಲ್ಲ. ನಾನು ಭ್ರಷ್ಟ ಅಧಿಕಾರಿ ಆಗಲಾರೆ’ ಶೀರ್ಷಿಕೆಯನ್ನು ಸಿದ್ಧಪಡಿಸಿ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಜರುಗಿಸಲು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆದ್ದಿದ್ದಾರೆ.

ಇದನ್ನೂ ಓದಿ: ರೈತ ಸಂಘದಿಂದ 'Payfarmer' ಅಭಿಯಾನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News