ಕಾಂಗ್ರೆಸ್ ನ ಹಗರಣಗಳ ದಾಖಲೆಗಳನ್ನು ಹುಡುಕಲು ತುಂಬಾ ಕಷ್ಟವಾಗಿದೆ: ನಳಿನ್‍ ಕುಮಾರ್ ಕಟೀಲ್

Update: 2022-09-26 14:06 GMT

ಬಾಗಲಕೋಟೆ, ಸೆ.26: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಮುಚ್ಚಿಹಾಕಲು ಲೋಕಾಯುಕ್ತವನ್ನೇ ಮುಗಿಸಿದರು. ಹಾಗೊಂದು ಬಾರಿ ಲೋಕಾಯುಕ್ತ ಇದ್ದಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಅಂದೇ ಕಾರಾಗೃಹ ಪಾಲಾಗುತ್ತಿದ್ದರು ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ ಕುಮಾರ್ ಕಟೀಲ್ ಹೇಳಿದ್ದಾರೆ. 

ಸೋಮವಾರ ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸಿಬಿಯಲ್ಲಿದ್ದ ಅಧಿಕಾರವನ್ನು ಮತ್ತೆ ಲೋಕಾಯುಕ್ತಕ್ಕೆ ನೀಡಲಾಗಿದೆ. 40 ಪರ್ಸೆಂಟ್ ಎನ್ನುವವರು ಪೂರ್ಣ ದಾಖಲೆ ಪಡೆದು ಲೋಕಾಯುಕ್ತಕ್ಕೆ ಹೋಗಬಹುದು ಎಂದು ತಿಳಿಸಿದರು. 

ಸಿಎಂ ಸ್ಥಾನಕ್ಕಿರುವ ಮೌಲ್ಯವನ್ನು ಕಾಂಗ್ರೆಸ್ ಅಪವಿತ್ರ ಮಾಡುತ್ತಿದೆ. ಸಿದ್ದರಾಮಯ್ಯ ಅವರ ಹಗರಣ ಬಹಳ ಇತ್ತು. ಈಗ ಅದನ್ನ ನಾವು ತೆಗೆಯುತ್ತೇವೆ. ಸಿದ್ದು ಸಿಎಂ ಇದ್ದಾಗ ದಾಖಲೆ ಕದ್ದು ಒಳಗಡೆ ಮುಚ್ಚಿ ಇಟ್ಟಿದ್ದಾರೆ. ಹೀಗಾಗಿ ದಾಖಲೆ ಹುಡುಕುವುದು ನಮಗೆ ಕಷ್ಟವಾಗಿದೆ. ಅರ್ಕಾವತಿ, ಹಾಸ್ಟೇಲ್ ದಿಂಬು, ಮೊಟ್ಟೆ ಹೀಗೆ ಎಲ್ಲದರಲ್ಲೂ ಹಗರಣ ಮಾಡಿದ್ದಾರೆ ಎಂದು ಆರೋಪಿಸಿದರು. 

ಇದನನ್ನೂ ಓದಿ>>> 'ಪೇಸಿಎಂ' ನಿಂದ ಬೇಸತ್ತು ಭ್ರಷ್ಟಾಚಾರದ ವಿರುದ್ಧ ಅಭಿಯಾನಕ್ಕೆ ಮುಂದಾದ ರಾಜ್ಯ ಸರಕಾರ

ಕಾಂಗ್ರೆಸ್ ಕಾಲದಲ್ಲೇ ಪಿಎಸ್ಸೈ ಹಗರಣ ಆಗಿದ್ದು, ತನಿಖೆ ಮಾಡಲು ಇವರಿಗೆ ಧೈರ್ಯ ಇರಲಿಲ್ಲ. ಡಿಐಜಿ ಹಂತದ ಅಧಿಕಾರಿಗಳನ್ನು ಜೈಲಿಗೆ ಹಾಕಿದ್ದೇವೆ. ನಮ್ಮ ಸರಕಾರ ತನಿಖೆ ಪೂರ್ಣಗೊಳಿಸುತ್ತೇ. ಶಿಕ್ಷಕರ ನೇಮಕಾತಿಯಲ್ಲಿಯೂ ಅಕ್ರಮವಾಗಿದೆ. ಅದರ ತನಿಖೆ ಮುಂದುವರೆದಿದೆ. ಇದನ್ನು ಕಾಂಗ್ರೆಸ್ ಮಾಡಲಿಲ್ಲ. ಲೋಕಾಯುಕ್ತ ಬಂದ್ ಮಾಡಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದರು ಎಂದು ತಿಳಿಸಿದರು. 

ರಾಹುಲ್ ಭಾರತ ಜೋಡೋ ಜೊತೆ ಕಾಂಗ್ರೆಸ್ ಜೋಡೋ ಮಾಡಿದರೇ ಒಳ್ಳೆಯದಿತ್ತು. ಕಾಶ್ಮೀರದಲ್ಲಿ ಪ್ರಮುಖರೆಲ್ಲ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್ ಇಲ್ಲದಂತಾಗಿದೆ. ಕಾಂಗ್ರೆಸ್ ಒಡಕು ಈ ದೇಶದಲ್ಲೇ ಕಾಣಿಸುತ್ತಿದೆ. 23 ಜಿಲ್ಲೆಯ ಎಲ್ಲ ಪ್ರಮುಖರು ಕಾಂಗ್ರೆಸ್ ಬಿಟ್ಟು ಹೋಗುತ್ತಿದ್ದಾರೆ. ರಾಹುಲ್ ಪೂರ್ವ ತಯಾರಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಹೋಗುತ್ತಿಲ್ಲ. ಇದೊಂದು ಡಿಕೆಶಿಯವರ ಕಾರ್ಯಕ್ರಮ ಎಂದಾಗಿದೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News