ಸಿಸಿಬಿ, ಎಸಿಬಿ ಹೆಸರಿನಲ್ಲಿ ಹಣ ವಸೂಲಿ ಆರೋಪ: ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ಸೆರೆ

Update: 2022-09-27 17:02 GMT

ಬೆಂಗಳೂರು, ಸೆ.27: ಭ್ರಷ್ಟಚಾರ ನಿಗ್ರಹ ದಳ, ಸಿಸಿಬಿ ಹೆಸರಿನಲ್ಲಿ ವಂಚನೆ ಮಾಡಿದ್ದ ಆರೋಪದಡಿ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ಯೋರ್ವನನ್ನು ಕೋಡಿಗೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ತಾನುಸಿಸಿಬಿ ಪೊಲೀಸ್‍ ಎಂದು ಹೇಳಿ ಸ್ಪಾ ಅಂಡ್‍ ಸೆಲ್ಯೂನ್‍ನಲ್ಲಿ 20 ಸಾವಿರ ವಸೂಲಿ ಮಾಡಿದ್ದನು ಎನ್ನಲಾಗಿದೆ. ಈ ಸಂಬಂಧ ಸ್ಪಾ ಮಾಲಕಿ ಸ್ಮಿತಾ ಎಂಬಾಕೆ ದೂರು ನೀಡಿದ್ದರು. ಈ ಹಿನ್ನಲೆ ಆನಂದ್‍ ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‍ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

ಇನ್ನೂ, ಆರೋಪಿಯೂ ಸದ್ಯ ಸಿಸಿಬಿ ಎಸಿಪಿಯಾಗಿರುವ ರೀನಾಸುವರ್ಣಾ ಅವರ ಆಪ್ತ ಎಂದು ಹೇಳಿ ವಸೂಲಿ ಮಾಡುತ್ತಿದ್ದ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ. ಈತ ಹಿಂದೆ ಪೀಣ್ಯಾ ಅಗ್ನಿಶಾಮಕ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದನು.

ಇದೇ ರೀತಿಯ ಕೃತ್ಯದ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ಬಂದ ಹಿನ್ನಲೆ ಆನಂದ್‍ ನನ್ನುಅಮಾನತು ಮಾಡಿದ್ದರು.ನಂತರನೇರವಾಗಿ ಅಥಣಿ ಅಗ್ನಿಶಾಮಕ ದಳಕ್ಕೆ ಸೇರ್ಪಡೆಯಾಗಿದ್ದ. ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಯೊಂದಕ್ಕೆ ತೆರಳಿ ಅಲ್ಲಿಯೂ ಕೂಡ ವಸೂಲಿ ಮಾಡಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News