×
Ad

ದಸರಾ ಕ್ರೀಡಾಕೂಟದ ಕ್ರೀಡಾಪಟುಗಳಿಗೆ ವಸತಿ ನೀಡದೆ ಅವಮಾನ: ಕಾಂಗ್ರೆಸ್ ಆರೋಪ

Update: 2022-09-29 14:57 IST

ಬೆಂಗಳೂರು: ದಸರಾ ಕವಿಗೋಷ್ಠಿಯ ಎಡವಟ್ಟಿನ ನಂತರ ಕ್ರೀಡಾಕೂಟದ ಕ್ರೀಡಾಪಟುಗಳಿಗೆ ವಸತಿ ನೀಡದೆ ಅವಮಾನ ಮಾಡಿದೆ ಎಂದು ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಆರೋಪಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ದಸರಾ ಅನುದಾನದಲ್ಲೂ 40% ಕಮಿಷನ್ ಕರಾಮತ್ತು ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ.  ಬಿಜೆಪಿ ಎಂಬ ಗಾಂಪರ ಗುಂಪಿನ ಸರ್ಕಾರದಲ್ಲಿ ಹೆಜ್ಜೆಹೆಜ್ಜೆಗೂ ಎಡವಟ್ಟುಗಳು, ವೈಫಲ್ಯಗಳು ಸಿಗುತ್ತಿವೆ. ಕ್ರೀಡಾಕೂಟದ ಕ್ರೀಡಾಪಟುಗಳಿಗೆ ಕನಿಷ್ಠ ವಸತಿ ನೀಡಲೂ ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲವೇ?'' ಎಂದು ಕಿಡಿಕಾರಿದೆ. 

ಇ್ತತ್ತೀಚೆಗೆ ದಸರಾ ಪ್ರಯುಕ್ತ ಅಕ್ಟೋಬರ್ 3ರಂದು ಮೈಸೂರು ವಿವಿಯ ಸೆನೆಟ್ ಸಭಾಂಗಣದಲ್ಲಿ  ಆಯೋಜಿಸಲಾಗಿದ್ದ ಪ್ರಧಾನ ಕವಿಗೋಷ್ಠಿಯಲ್ಲಿ ಭಾಗವಹಿಸುವ 37 ಕವಿಗಳಲ್ಲಿ ಮೂರು ವರ್ಷಗಳ ಹಿಂದೆಯೇ ಮೃತಪಟ್ಟ ಹಿರಿಯ ಕವಿ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ಜಿ.ಕೆ.ರವೀಂದ್ರ ಕುಮಾರ್ ಅವರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಕಾಣಸಿಕೊಂಡಿತ್ತು. ಬಳಿಕ  ಟೀಕೆ ವ್ಯಕ್ತವಾಗುತ್ತಲೇ ಆಹ್ವಾನ ಪತ್ರಿಕೆಯನ್ನು ದಸರಾ ಕವಿಗೋಷ್ಠಿ ಉಪ ಸಮಿತಿ ಮರು ಮುದ್ರಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News