''ಕಾಂಗ್ರೆಸ್ ನಾಯಕರು ಕೂಡ ಕ್ಷಮಾಪಣಾ ಅರ್ಜಿ ಬರೆಯುತ್ತಾ ಕೂತಿದ್ದರೆ, ನೀವು‌‌ ಬ್ರಿಟಿಷರ ಗುಲಾಮರಾಗಿಯೇ ಇರಬೇಕಿತ್ತು''

Update: 2022-09-29 12:44 GMT

ಬೆಂಗಳೂರು: 'ದೇಶದಲ್ಲಿ ಮೊದಲು ಕಾಂಗ್ರೆಸ್ ಪಕ್ಷವನ್ನು ನಿಷೇಧ ಮಾಡಬೇಕು' ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. 

''ನಳಿನ್ ಕುಮಾರ್ ಕಟೀಲ್ ಅವರೇ, (Nalin Kumar Kateel)  ಒಂದು ವೇಳೆ ಕಾಂಗ್ರೆಸ್ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸದೆ, ಕ್ಷಮಾಪಣಾ ಅರ್ಜಿ ಬರೆಯುತ್ತಾ ಕೂತಿದ್ದರೆ ನೀವು‌‌ ಇಂದೂ ಬ್ರಿಟಿಷರ ಗುಲಾಮರಾಗಿಯೇ ಇರಬೇಕಿತ್ತು. ನೆನಪಿರಲಿ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

'ದೇಶದಲ್ಲಿ ಪಿಎಫ್ ಐ, ಎಸ್ ಡಿಪಿಐ ಹಾಗೂ ಕೆಎಫ್ ಡಿ ಸಂಘಟನೆಗಳಿಗೆ ಕಾಂಗ್ರೆಸ್  ಬೆಂಬಲ ಹಾಗೂ ಶಕ್ತಿ ಕೊಟ್ಟಿದೆ. ಆದ್ದರಿಂದ ದೇಶದಲ್ಲಿ ಮೊದಲು ಕಾಂಗ್ರೆಸ್ ಪಕ್ಷವನ್ನು ನಿಷೇಧ ಮಾಡಬೇಕು' ಎಂದು ಬೆಳಗಾವಿಯಲ್ಲಿ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. 

ಇದನ್ನೂ ಓದಿ: ಕಾರಾಗೃಹದಿಂದಲೇ ಚೆಕ್ ಗೆ ಸಹಿ ಹಾಕಲು ಅನುಮತಿ ಕೋರಿದ ಮುರುಘಾ ಶ್ರೀ: ಹೈಕೋರ್ಟ್ ಅತೃಪ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News