PFI ನಿಷೇಧ ಹಿಂಪಡೆಯುವಂತೆ ಪಿಯುಸಿಎಲ್ ಆಗ್ರಹ

Update: 2022-09-29 14:58 GMT

ಬೆಂಗಳೂರು, ಸೆ.29: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಮೇಲಿನ ನಿಷೇಧವನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಹಾಗೂ ಪಿಎಫ್‍ಐಯೊಂದಿಗೆ ಸಂವಾದ ನಡೆಸಬೇಕು ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್(ಪಿಯುಸಿಎಲ್) ಆಗ್ರಹಿಸಿದೆ.

'ಬಂಧಿಸಲ್ಪಟ್ಟಿರುವ ಎಲ್ಲರನ್ನು ಬಿಡುಗಡೆ ಮಾಡಬೇಕು. ಪಿಎಫ್‍ಐ ಹಾಗೂ ಅದರ ಅಂಗ ಸಂಸ್ಥೆಗಳಿಗೆ ಸದಸ್ಯತ್ವ ಕಲ್ಪಿಸುವುದು ಹಾಗೂ ಬೆಂಬಲ ನೀಡಿದ ಆಧಾರದ ಮೇಲೆ ಮುಸ್ಲಿಮ್ ಯುವಕರನ್ನು ಗುರಿಯಾಗಿಸಿ ಬಂಧಿಸುವ ಅಧಿಕಾರದ ಅನಿಯಂತ್ರಿತ ಬಳಕೆಯಿಂದ ದೂರವಿರಬೇಕು' ಎಂದು ಪಿಯುಸಿಎಲ್ ಪ್ರಧಾನ ಕಾರ್ಯದರ್ಶಿ ವಿ.ಸುರೇಶ್ ಆಗ್ರಹಿಸಿದ್ದಾರೆ.

'ಅಸಂವಿಧಾನಿಕವಾದ ಯುಎಪಿಎ ಕಾಯ್ದೆ ಹಾಗೂ ಎನ್‍ಐಎ ಕಾಯ್ದೆಯನ್ನು ರದ್ದುಗೊಳಿಸಬೇಕು. ಅಲ್ಲದೆ, ಎನ್‍ಐಎ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದಲ್ಲಿ ಯಾರನ್ನಾದರೂ ಬಂಧಿಸುವ ಅಥವಾ ದಾಳಿಯನ್ನು ಮಾಡುವ ಮೊದಲು ಎನ್‍ಐಎ ಹಾಗೂ ಕೇಂದ್ರ ಗೃಹ ಇಲಾಖೆಯೂ ರಾಜ್ಯ ಸರಕಾರದ ಅನುಮತಿ ಪಡೆಯುವಂತೆ ತಿದ್ದುಪಡಿ ತರಬೇಕು' ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News