ವಿವಿಧ ಬೇಡಿಕೆಗಳ ಈಡೇರಿಕೆಗೆ ಸಚಿವಾಲಯ ನೌಕರರ ಪಟ್ಟು

Update: 2022-09-29 16:35 GMT

ಬೆಂಗಳೂರು, ಸೆ.29: ರಾಜ್ಯ ಸರಕಾರಿ ನೌಕರರ ವೇತನ ಸೌಲಭ್ಯಗಳ ಪರಿಷ್ಕರಣೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯ ಅಧ್ಯಕ್ಷತೆಯಲ್ಲಿ 7ನೆ ವೇತನ ಆಯೋಗ ರಚಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನ ಮೈದಾನದಲ್ಲಿ ರಾಜ್ಯ ಸರಕಾರಿ ನೌಕರರ ವಿವಿಧ ಸಂಘಟನೆಗಳ ಮತ್ತು ಇಲಾಖಾ ಹಾಗೂ ವೃಂದ ಸಂಘಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ನೌಕರರು, ಆಡಳಿತ ಸುಧಾರಣಾ ಆಯೋಗ–2ರವರದಿಯಲ್ಲಿರುವನೌಕರವಿರೋಧಿಶಿಫಾರಸುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಅವಧಿಯಲ್ಲಿ ಮುಟ್ಟಗೋಲು ಹಾಕಿಕೊಂಡಿರುವ ನೌಕರರ ಮತ್ತು ಪಿಂಚಣಿದಾರರ 18 ತಿಂಗಳ ತುಟ್ಟಿಭತ್ಯೆ ತಕ್ಷಣ ಬಿಡುಗಡೆ ಮಾಡಬೇಕು, 2022ರ ಜುಲೈನಿಂದ ಜಾರಿಗೆ ಬರುವಂತೆ ಶೇ 25ರಷ್ಟು ಮಧ್ಯಂತರ ಪರಿಹಾರವನ್ನೂ ಕೂಡಲೇ ಘೋಷಿಸಬೇಕು ಎಂದು ಒತ್ತಾಯಿಸಿದರು.

ನೂತನ ಪಿಂಚಣಿ ಪದ್ಧತಿಯನ್ನು ರದ್ದುಪಡಿಸಿ ನಿಶ್ಚಿತ ಪಿಂಚಣಿ ಪದ್ಧತಿ ಮತ್ತೆ ಆರಂಭಿಸಬೇಕು. ಆಡಳಿತ ಸುಧಾರಣಾ ಆಯೋಗ–2ರವರದಿಯಲ್ಲಿರುವನೌಕರವಿರೋಧಿಶಿಫಾರಸುಗಳನ್ನು ಕೈಬಿಡಬೇಕು, ಖಾಲಿ ಇರುವ 2.80 ಲಕ್ಷಹುದ್ದೆಗಳನ್ನುಭರ್ತಿಮಾಡಬೇಕು ಎಂದೂ ಪ್ರತಿಭಟನಾಕಾರರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News