ಉಗ್ರ ಸಂಘಟನೆಯೊಂದಿಗೆ ನಂಟು ಆರೋಪ: ಇಬ್ಬರು ಶಂಕಿತರಿಗೆ 14 ದಿನ ನ್ಯಾಯಾಂಗ ಬಂಧನ

Update: 2022-09-30 15:21 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ: ನಿಷೇಧಿತ ಉಗ್ರ ಸಂಘಟನೆ  ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ  ಬಂಧಿತರಾಗಿರುವ ಇಬ್ಬರು ಶಂಕಿತರಿಗೆ ಶಿವಮೊಗ್ಗದ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.

ಶಂಕಿತ ಉಗ್ರರಾದ ಮಾಝ್ ಹಾಗೂ ಸೈಯ್ಯದ್ ಯಾಸೀನ್​ ಅವರ ಮೇಲೆ ಉಗ್ರ ಚಟುವಟಿಕೆ, ಬಾಂಬ್ ತಯಾರಿಸಿ ಬ್ಲಾಸ್ಟ್ ನಡೆಸಿ, ರಾಷ್ಟ್ರಧ್ವಜ ಸುಟ್ಟ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಯುಎಪಿ ಕಾಯ್ದೆಯಡಿ ಇವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಶಂಕಿತ ಉಗ್ರರಾದ ಮಾಝ್ ಹಾಗೂ ಯಾಸೀನ್​ ಅವರನ್ನು ಸೆಪ್ಟೆಂಬರ್ 20ರಂದು ಬಂಧನ ಮಾಡಲಾಗಿತ್ತು. ನಂತರ ಸೆಪ್ಟೆಂಬರ್ 27 ರ ತನಕ ಪೊಲೀಸ್ ಕಸ್ಟಡಿ ನೀಡಲಾಗಿತ್ತು. 27 ರಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿದಾಗ ಸೆಪ್ಟೆಂಬರ್ 30ರ ತನಕ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯ ಸೆ.30 ರಿಂದ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News